ADVERTISEMENT

ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ: ದಲೈಲಾಮಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ನವದೆಹಲಿ: ವರ್ಣಬೇಧ ನೀತಿ ವಿರೋಧಿ ಹರಿಕಾರ ನೆಲ್ಸನ್‌ ಮಂಡೇಲಾ ಅವರ ಸಾವಿಗೆ ಕಂಬನಿ ಮಿಡಿದಿರುವ ಟಿಬೆಟ್‌ನ ಧರ್ಮಗುರು ದಲೈಲಾಮ, ‘ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ’  ಎಂದಿದ್ದಾರೆ. ‘ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಅವಕಾಶವಿತ್ತಾದರೂ, ಅಲ್ಲಿನ ನೀತಿಯ ಪ್ರಕಾರ ತಮಗೆ ವೀಸಾ ಸಿಗಲಿಲ್ಲ.

ಇದರಿಂದಾಗಿ ಆ ದೇಶಕ್ಕೆ ತೆರಳಿ ಮತ್ತೊಮ್ಮೆ ನೆಲ್ಸನ್‌ ಮಂಡೇಲಾ ಅವರನ್ನು ಭೇಟಿ ಮಾಡುವ ಅವಕಾಶ ಕೈತಪ್ಪಿತು’ ಎಂದು ಅವರು ಸ್ಮರಿಸಿದ್ದಾರೆ. ಶ್ರೇಷ್ಠ ರಾಜತಂತ್ರಜ್ಞ ಮನುಕುಲಕ್ಕೆ ಸ್ಫೂರ್ತಿಯಾಗಿದ್ದ ಮಂಡೇಲಾ ಭಾರತದ ಆತ್ಮೀಯ ಮಿತ್ರರಾಗಿದ್ದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಆತ್ಮೀಯ ಬಾಂಧವ್ಯಕ್ಕೆ ಶ್ರೇಷ್ಠ ರಾಜತಂತ್ರಜ್ಞರಾಗಿದ್ದ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯ.
–ಪ್ರಣವ್‌ ಮುಖರ್ಜಿ, ರಾಷ್ಟ್ರಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT