ADVERTISEMENT

ಉದ್ಯಮಿ ವರ್ಮ ಮನೆ, ಕಚೇರಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST

ನವದೆಹಲಿ (ಪಿಟಿಐ): ನೌಕಾಪಡೆ ನಿರ್ದೇಶನಾಲಯದಿಂದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಿಲುಕಿರುವ ಉದ್ಯಮಿ ಅಭಿಷೇಕ್ ವರ್ಮ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಅಪರಾಧ ತನಿಖಾ ಸಿಬ್ಬಂದಿ ಗುರುವಾರ ಜಂಟಿ ಶೋಧ ಕಾರ್ಯ ನಡೆಸಿದರು.

ದೆಹಲಿ, ಗುಡಗಾಂವ್‌ನ 10 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿ, ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆಯು ವರ್ಮ ಹಾಗೂ ಅವರ ಆಪ್ತರ ವಿದೇಶಿ ಬ್ಯಾಂಕುಗಳ ಖಾತೆಗಳ ಮೇಲೆ ನಿಗಾ ಇರಿಸಿದೆ. ವರ್ಮ ಹಾಗೂ ಆಪ್ತರು  ಸ್ವಿಟ್ಜರ್‌ಲೆಂಡ್ ಹಾಗೂ ಇನ್ನಿತರ ಹೊರ ರಾಷ್ಟ್ರಗಳಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ರಹಸ್ಯ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಕಲೆಹಾಕಿದೆ ಎನ್ನಲಾಗಿದೆ.

ADVERTISEMENT

ಸ್ವಿಟ್ಜರ್‌ಲೆಂಡ್‌ನ ಕಂಪೆನಿಯೊಂದನ್ನು ಸರ್ಕಾರದ ಕಪ್ಪುಪಟ್ಟಿಯಿಂದ ಕೈಬಿಡಲು ವರ್ಮ ಭಾರಿ ಲಂಚ ಪಡಿದಿರುವ ಬಗ್ಗೆ ಸಿಬಿಐ ದೂರು ದಾಖಲಿಸಿದೆ ಎಂದೂ ಹೇಳಲಾಗಿದೆ.

2006ರಲ್ಲಿ ನೌಕಾಪಡೆ ನಿರ್ದೇಶನಾಲಯದಿಂದ ರಹಸ್ಯ ಮಾಹಿತಿಗಳನ್ನು ಸೋರಿಕೆ  ಮಾಡಿದ ಆರೋಪವೂ ವರ್ಮ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.