ADVERTISEMENT

ಉ.ಪ್ರ: ಎರಡನೇ ಹಂತ, ಶೇಕಡಾ 34 ಮತದಾನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:00 IST
Last Updated 11 ಫೆಬ್ರುವರಿ 2012, 10:00 IST

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಗೆ ಶನಿವಾರ ಬೆಳಗ್ಗೆ ಆರಂಭವಾದ ಎರಡನೇ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ ಮತದಾನ ನೀರಸವಾಗಿ ಆರಂಭವಾದರೂ ನಂತರ ಚುರುಕಾಗಿದ್ದು ಮೊದಲ ಆರು ಗಂಟೆಗಳ ಅವಧಿಯಲ್ಲಿ ಒಟ್ಟು 1.92 ಕೋಟಿ ಮತದಾರರ ಪೈಕಿ ಶೇಕಡಾ 34ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ.

~ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಮಧ್ಯಾಹ್ನ 1 ಗಂಟೆಯವರೆಗೆ 9 ಜಿಲ್ಲೆಗಳ 59 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಶೇಕಡಾ 34 ಮಂದಿ ಬಿಗಿ ಭದ್ರತೆಯ ಮಧ್ಯೆ ಮತ ಚಲಾಯಿಸಿದರು ಎಂದು ಚುನಾವಣಾ ಆಯೋಗದ ಮೂಲಗಳು ಇಲ್ಲಿ ತಿಳಿಸಿವೆ.

ದೇವರಿಯಾ ಜಿಲ್ಲೆಯಲ್ಲಿ ಗರಿಷ್ಠ ಶೇಕಡಾ 40 ರಷ್ಟು ಮತದಾನವಾಗಿದ್ದು ಸಂತ ಕಬೀರ ನಗರದಲ್ಲಿ ಕನಿಷ್ಠ ಅಂದರೆ ಶೇಕಡಾ 28.3ರಷ್ಟು ಮತದಾನ ಆಗಿದೆ ಎಂದು ಮೂಲಗಳು ಹೇಳಿದವು.

ಬಲ್ಲಿಯಾ ಜಿಲ್ಲೆಯಲ್ಲಿ ಶೇಕಡಾ 34, ಅಝಗಢದಲ್ಲಿ ಶೇಕಡಾ 33.3, ಘಾಜಿಪುರದಲ್ಲಿ ಶೇಕಡಾ 31, ಕುಶಿನಗರದಲ್ಲಿ ಶೇಕಡಾ 38, ಮಹಾರಾಜ ಗಂಜ್ ನಲ್ಲಿ ಶೇಕಡಾ 36, ಗೋರಖ್ ಪುರದಲ್ಲಿ ಶೇಕಡಾ 33.5, ಮಾವುನಲ್ಲಿ ಶೇಕಡಾ 34, ದೇವರಿಯಾದಲ್ಲಿ ಶೇಕಡಾ 39.31 ಮತದಾನ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.