ADVERTISEMENT

ಎಎಪಿ ಬೆಂಬಲಿಗನಲ್ಲ: ಅಮೀರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2014, 12:36 IST
Last Updated 28 ಮಾರ್ಚ್ 2014, 12:36 IST
ಎಎಪಿ ಬೆಂಬಲಿಗನಲ್ಲ: ಅಮೀರ್ ಸ್ಪಷ್ಟನೆ
ಎಎಪಿ ಬೆಂಬಲಿಗನಲ್ಲ: ಅಮೀರ್ ಸ್ಪಷ್ಟನೆ   

ಮುಂಬೈ(ಪಿಟಿಐ):  ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಗೆ ತಾನು ಬೆಂಬಲ ನೀಡುವುದಿಲ್ಲ ಎಂಬುದನ್ನು ಬಾಲಿವುಡ್ ಚಿತ್ರನಟ ಅಮೀರ್ ಖಾನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಮೀರ್ ಎಎಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು. 49 ವರ್ಷದ ‘ಧೂಮ್ 3’ರ ನಾಯಕ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂಬ ಟ್ವೀಟ್ ಸಂದೇಶ ಎಎಪಿಯ ಟ್ವಿಟ್ಟರ್‌ನಲ್ಲಿ  ಕಾಣಿಸಿಕೊಂಡಿತ್ತು. 

ಇದನ್ನೆಲ್ಲಾ ಗಮನಿಸಿದ ಅಮೀರ್ ತಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿಲ್ಲವೆಂದು ಚುನಾವಣಾ ಆಯೋಗಕ್ಕೆ ಸ್ಪಷ್ಟ ಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.