ADVERTISEMENT

ಎಸ್ ಬ್ಯಾಂಡ್: ಪ್ರಧಾನಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:00 IST
Last Updated 24 ಫೆಬ್ರುವರಿ 2011, 16:00 IST

ನವದೆಹಲಿ (ಪಿಟಿಐ): ಎಸ್ ಬ್ಯಾಂಡ್ ಸ್ಪೆಕ್ಟ್ರಂ ಒಪ್ಪಂದಕ್ಕೆ ಅನುಮತಿ ಕೋರಿದ್ದ ಯಾವುದೇ ಮನವಿ ತಮ್ಮ ಕಚೇರಿಗೆ ಬಂದಿರಲಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ಒಪ್ಪಂದಕ್ಕೆ ಅನುಮತಿ ನೀಡುವಂತೆ ಪ್ರಧಾನಿ ಕಚೇರಿಯನ್ನು ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ದೇವಾಸ್ ಮಲ್ಟಿಮೀಡಿಯಾ ಲಿಮಿಟೆಡ್ ಮತ್ತು ಅಂತರಿಕ್ಷ್ ನಿಗಮದ ನಡುವಿನ ಒಪ್ಪಂದಕ್ಕೆ ಅನುಮತಿ ಸಿಕ್ಕಿದ್ದಕ್ಕೆ ಪ್ರಧಾನಿ ಕಚೇರಿಯ ಯಾರು ಹೊಣೆ ಎಂದು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಕೇಳಿದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಅಂತರಿಕ್ಷ್ ನಿಗಮವು ಇಸ್ರೊದ ವಾಣಿಜ್ಯ ಘಟಕವಾಗಿದ್ದು ಸಾಮಾನ್ಯವಾಗಿ ದೇವಾಸ್ ಜೊತೆಗಿನ ಅದರ ಒಪ್ಪಂದದ ಅನುಮತಿಯನ್ನು ಸರ್ಕಾರದ ಬಳಿ ಕೇಳುವುದಿಲ್ಲ. ಕೇವಲ ಉಪಗ್ರಹ ಉಡಾವಣೆಗೆ ಸಂಬಂಧಿಸಿದ ವಿಷಯ ಮಾತ್ರ ಸಂಪುಟದ ಮುಂದೆ ಬಂದಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.