ADVERTISEMENT

ಏರ್‌ ಏಷ್ಯಾ ಸಿಇಒ ಟೋನಿ ವಿರುದ್ಧ ಸಿಬಿಐ ಎಫ್‌ಐಆರ್

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಟೋನಿ
ಟೋನಿ   

ನವದೆಹಲಿ: ವಿಮಾನಗಳ ಅಂತರರಾಷ್ಟ್ರೀಯ ಸೇವೆಗೆ ಪರವಾನಗಿ ಪಡೆಯುವಲ್ಲಿ ನಿಯಮಾವಳಿ ಉಲ್ಲಂಘಿಸಿದ ಆರೋಪದ ಅಡಿ ಏರ್‌ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೋನಿ ಫರ್ನಾಂಡೀಸ್ ಮತ್ತು ಇನ್ನೂ ಹಲವರ ವಿರುದ್ಧ ಸಿಬಿಐ ಮಂಗಳವಾರ ಎಫ್‌ಐಆರ್ ದಾಖಲಿಸಿದೆ.

ಅಂತರರಾಷ್ಟ್ರೀಯ ಸೇವೆಗೆ ಪರವಾನಗಿ ಪಡೆಯಲು ವಿಮಾನಯಾನ ಸೇವಾ ಸಂಸ್ಥೆಯು ಐದು ವರ್ಷಗಳ ಕಾರ್ಯಾಚರಣೆ ಅನುಭವ ಹೊಂದಿರಬೇಕು. ಅಂತರರಾಷ್ಟ್ರೀಯ ಸೇವೆಗೆ 20 ವಿಮಾನ ಒದಗಿಸಲು ತಯಾರಿರಬೇಕು ಎಂಬ ನಿಬಂಧನೆ ಜಾರಿಯಲ್ಲಿವೆ.

ಆದರೆ, ಅಧಿಕಾರಿಗಳಿಗೆ ಆಮಿಷವೊಡ್ಡಿದ್ದ ಟೋನಿ ಫರ್ನಾಂಡೀಸ್ ಅವರು ಈ ನಿಬಂಧನೆಗಳಿಂದ ವಿನಾಯಿತಿ ಪಡೆದಿದ್ದರು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯ ನಿಯಮಗಳನ್ನೂ ಉಲ್ಲಂಘಿಸಿರುವ ಆರೋಪವೂ ಏರ್‌ ಏಷ್ಯಾ ಖಾಸಗಿ ವಿಮಾನಯಾನ ಸಂಸ್ಥೆಯ ಮೇಲಿದೆ.

ADVERTISEMENT

ಅಧಿಕಾರಿಗಳ ವಿರುದ್ಧ ಪ್ರಕರಣ

ಏರ್‌ ಏಷ್ಯಾದ ಟ್ರಾವೆಲ್ ಫುಡ್ ಮಾಲೀಕ ಸುನಿಲ್ ಕಪೂರ್, ಏರ್‌ ಏಷ್ಯಾ ನಿರ್ದೇಶಕ ಆರ್.ವೆಂಕಟರಾಮನ್, ಸಿಂಗಪುರದ ಎಸ್‌ಎನ್‌ಆರ್ ಟ್ರೇಡಿಂಗ್‌ನ ನಿರ್ದೇಶಕ ರಾಜೇಂದ್ರ ದುಬೆ, ವಿಮಾನಯಾನ ಸಮಾಲೋಚಕ ದೀಪಕ್ ತಲ್ವಾರ್ ಮತ್ತು ಕೆಲವು ಅನಾಮದೇಯ ಸರ್ಕಾರಿ ನೌಕರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.