ADVERTISEMENT

ಏಷ್ಯಾ ಸಾಹಿತ್ಯ ಪ್ರಶಸ್ತಿ ಅನಂತಮೂರ್ತಿ ಕೃತಿ ನಾಮಕರಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್):  ದಕ್ಷಿಣ ಏಷ್ಯಾ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ `ಡಿಎಸ್‌ಸಿ-2012~ಗೆ ಖ್ಯಾತ ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ತಬಿಶ್ ಖೈರ್ ಹಾಗೂ ಚಂದ್ರಕಾಂತ್ ಸೇರಿದಂತೆ ಆರು ಮಂದಿ ನಾಮಾಂಕಿತಗೊಂಡಿದ್ದಾರೆ.

ಪ್ರಶಸ್ತಿ ಐವತ್ತು ಸಾವಿರ ಡಾಲರ್ ನಗದು ಒಳಗೊಂಡಿದ್ದು, 2012ರ ಜನವರಿಯಲ್ಲಿ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪಾಕ್‌ನ ಯುವ ಬರಹಗಾರ ಎಚ್.ಎಂ.ನಕ್ವಿ ಅವರ `ಹೋಂ ಬಾಯ್~ ಕೃತಿಗೆ ಕಳೆದ ವರ್ಷದ ಪ್ರಶಸ್ತಿ ಲಭಿಸಿತ್ತು.
ಅನಂತಮೂರ್ತಿ ಅವರ `ಭಾರತೀಪುರ~, ಚಂದ್ರಕಾಂತ್ ಅವರ `ಎ ಸ್ಟ್ರೀಟ್ ಇನ್ ಶ್ರೀನಗರ್~, ಉಷಾ ಕೆ.ಆರ್ ಅವರ `ಮಂಕಿ ಮ್ಯಾನ್~, ಶಹನಾ ಕರುಣತಿಲಕ ಅವರ `ಚಿನಾಮ: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ~, ತಬಿಶ್ ಖೈರ್ ಅವರ `ದಿ ಥಿಂಗ್ ಅಬೌಟ್ ಥಗ್ಸ್~ ಮತ್ತು ಕಾವೇರಿ ನಂಬೀಶನ್ ಅವರ `ದಿ ಸ್ಟೋರಿ ದಟ್ ಮಸ್ಟ್ ನಾಟ್ ಬಿ ಟೋಲ್ಡ್~ ಕೃತಿಗಳು ಪ್ರಶಸ್ತಿಗೆ ನಾಮಕರಣವಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.