ಢಾಕಾ(ಪಿಟಿಐ): ನಾಲ್ಕು ದಶಕಗಳ ಕಾಲ ಕಗ್ಗಂಟಾಗಿದ್ದ ಭಾರತ- ಬಾಂಗ್ಲಾದೇಶಗಳ ನಡುವಿನ ಗಡಿ ಭೂ ವಿವಾದಕ್ಕೆ ಅಂತ್ಯಹಾಡುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಶನಿವಾರ ಮಹತ್ವದ ಐತಿಹಾಸಿಕ ಗಡಿ ಭೂ ಒಪ್ಪಂದಕ್ಕೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾ ಪ್ರವಾಸ ಕೈಗೊಂಡಿದ್ದು, ಮೊದಲ ದಿನ ಎರಡೂ ರಾಷ್ಟ್ರಗಳು ಗಡಿ ಭೂ ಒಪ್ಪಂದ(ಎಲ್ ಬಿಎ)ದ ದಾಖಲೆಗಳ ವಿನಿಮಯ ಮಾಡಿಕೊಂಡಿವೆ. ಇದರೊಂದಿಗೆ 1974ರಿಂದ ಕಗ್ಗಂಟಾಗಿದ್ದ ಭೂ ಗಡಿ ವಿವಾದಕ್ಕೆ ತೆರೆ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉಪಸ್ಥಿತಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹಾಗೂ ಅವರ ಬಾಂಗ್ಲಾ ಸಹೋದ್ಯೋಗಿ ಶಾಹಿದುಲ್ ಹಖ್ ಅವರು ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.
‘ಐತಿಹಾಸಿಕ ಗಡಿ ಭೂ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮಾಡಿದ್ದಾರೆ.
ಈ ಒಪ್ಪಂದಿಂದ ಭಾರತಕ್ಕೆ 500 ಎಕರೆ ಭೂಮಿ ಲಭ್ಯವಾಗಲಿದ್ದು, ಭಾಂಗ್ಲಾದೇಶಕ್ಕೆ 10 ಸಾವಿರ ಎಕರೆ ಭೂಮಿ ದೊರೆಯಲಿದ್ದು, 50 ಸಾವಿರ ಜನರ ಪೌರತ್ವದ ಪ್ರಶ್ನೆಯನ್ನು ನಿವಾರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.