ನವದೆಹಲಿ: ಸ್ವಿಟ್ಜರ್‌ಲೆಂಡ್‌ನಲ್ಲಿ ಭಾರತದ ರಾಜತಾಂತ್ರಿಕರಾಗಿರುವ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪುತ್ರಿ ಚಿತ್ರಾ ನಾರಾಯಣನ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸುವ ಕಾರಣ ನೀಡಿ ಅಧಿಕಾರಾವಧಿಯನ್ನು ವಿಸ್ತರಿಸಿದ ಪರಿಣಾಮ ಚಿತ್ರಾ ಅವರ ಜಾಗಕ್ಕೆ ನೇಮಕವಾದ ರಾಜೇಶ್ ನಂದನ್ ಪ್ರಸಾದ್ ಅವರನ್ನು ವಿನಾಕಾರಣ ಒಂದು ವರ್ಷ ಕಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.
2012ರ ಜೂನ್‌ನಲ್ಲಿ ಚಿತ್ರಾ ನಿವೃತ್ತಿಯಾಗಬೇಕಿತ್ತು. ವಿದೇಶಾಂಗ ಸಚಿವಾಲಯ ಅವರ ಸ್ಥಾನಕ್ಕೆ ಐಎಫ್‌ಎಸ್ ಅಧಿಕಾರಿ ರಾಜೇಶ್ ನಂದನ್ ಪ್ರಸಾದ್ ಅವರ ನೇಮಕವನ್ನೂ ಮಾಡಿತ್ತು. ಆದರೆ ವೈದ್ಯಕೀಯ ಕಾರಣದಿಂದಾಗಿ ತಮಗೆ ಸ್ವಿಟ್ಜರ್‌ಲೆಂಡ್ ತೆರವುಗೊಳಿಸಲು ಅಸಾಧ್ಯವಾಗಿರುವುದರಿಂದ ಮತ್ತೊಂದು ವರ್ಷ ಸೇವಾವಧಿ ವಿಸ್ತರಣೆಗೆ ಚಿತ್ರಾ ಮನವಿ ಮಾಡಿದ್ದರು.
ಚಿತ್ರಾ ಅವರ ಮನವಿಯನ್ನು ಇತ್ಯರ್ಥಗೊಳಿಸಲಾಯಿತಾದರೂ ಅವರ ಸ್ಥಾನಕ್ಕೆ ನೇಮಕವಾದ ಪ್ರಸಾದ್ ಅವರಿಗೆ ಒಂದು ವರ್ಷವಾದರೂ ಸ್ಥಾನ ತೋರಿಸಿರಲಿಲ್ಲ. ಇದೀಗ ಪ್ರಸಾದ್ ಅವರನ್ನು ನೆದರ್‌ಲೆಂಡ್‌ನಲ್ಲಿ ಭಾರತದ ರಾಜತಾಂತ್ರಿಕರಾಗಿ ನೇಮಿಸಲಾಗಿದ್ದು ಅಲ್ಲಿಗೆ ತೆರಳಲು ಅವರೀಗ ಸಿದ್ಧರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.