ADVERTISEMENT

ಕನಿಮೋಳಿ ಜಾಮೀನು ಅರ್ಜಿ: ವಿರೋಧಿಸದ ಸಿಬಿಐ, ನವೆಂಬರ್ 3ಕ್ಕೆ ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 9:05 IST
Last Updated 24 ಅಕ್ಟೋಬರ್ 2011, 9:05 IST
ಕನಿಮೋಳಿ ಜಾಮೀನು ಅರ್ಜಿ: ವಿರೋಧಿಸದ ಸಿಬಿಐ, ನವೆಂಬರ್ 3ಕ್ಕೆ ತೀರ್ಪು
ಕನಿಮೋಳಿ ಜಾಮೀನು ಅರ್ಜಿ: ವಿರೋಧಿಸದ ಸಿಬಿಐ, ನವೆಂಬರ್ 3ಕ್ಕೆ ತೀರ್ಪು   

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಕನಿಮೋಳಿ ಮತ್ತು ಇತರ ನಾಲ್ವರ ಜಾಮೀನು ಅರ್ಜಿ ಕುರಿತ ತನ್ನ ಆದೇಶವನ್ನು ಸೋಮವಾರ ಕಾಯ್ದಿರಿಸಿತು.

ಕನಿಮೋಳಿ, ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ್ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ನವೆಂಬರ್  3ರಂದು ಪಕ್ರಟಿಸುವುದಾಗಿ ವಿಶೇಷ ನ್ಯಾಯಾಧೀಶರು ಪ್ರಕಟಿಸಿದರು.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕನಿಮೋಳಿ ಮತ್ತಿತರರು ಬೆಳಿಗ್ಗೆ ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
 
ದೋಷಾರೋಪ ಹೊರಿಸಿದ ಎರಡು ದಿನಗಳ ಬಳಿಕ ಸಲ್ಲಿಸಲಾದ ಕನಿಮೋಳಿ ಮತ್ತು ಕೆಟಿವಿ ಆಡಳಿತ ನಿರ್ದೇಶಕ ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಲಿಲ್ಲ.

ಆದರೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಬಲ್ವಾ ಮತ್ತು ಎ. ರಾಜಾ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಆರ್. ಕೆ. ಚಂಡೋಲಿಯ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.