ಚೆನ್ನೈ (ಪಿಟಿಐ): ಭೂಕಂಪನದ ಅನುಭವ, ಸುನಾಮಿ ಎಚ್ಚರಿಕೆಯ ಹೊರತಾಗಿಯೂ ಚೆನ್ನೈ ಸಮೀಪದ ಕಲ್ಪಾಕಂನ ಮದ್ರಾಸ್ ಪರಮಾಣು ವಿದ್ಯುತ್ ಕೇಂದ್ರ ಬುಧವಾರ ಎಂದಿನಂತೆ ಕಾರ್ಯನಿರ್ವಹಿಸಿತು.
ಸುನಾಮಿ ಮನ್ಸೂಚನೆಯ ಕಾರಣ ಮೊದಲಿಗೆ ನಾವು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಅಂಡಮಾನ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸ್ಥಾವರದಲ್ಲಿ ಕಾರ್ಯಾಚರಣೆ ಮುಂದುವರಿಸಿದೆವು. ಆದರೂ, ಸ್ಥಾವರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಲ್ಪಾಕಂ ಅಣು ಸ್ಥಾವರದ ನಿರ್ದೇಶಕ ಕೆ. ರಾಮಮೂರ್ತಿ ತಿಳಿಸಿದರು.
ಕೂಡುಂಕುಳಂ ಸ್ಥಾವರದ ಕಾಮಗಾರಿಯೂ ಎಂದಿನಂತೆ ನಡೆಯಿತು. ಸ್ಥಾವರದ ಆವರಣದ ಗೋಡೆಗಳು 7.5 ಮೀಟರ್ ಎತ್ತರ ಇರುವುದರಿಂದ ಹಾಗೂ ಇಡೀ ಸ್ಥಾವರವನ್ನು ಎತ್ತರಿಸಿದ ಅಡಿಪಾಯದ ಮೇಲೆ ಕಟ್ಟಿರುವುದರಿಂದ ಯಾವುದೇ ಭಯವಿಲ್ಲ ಎಂದು ಅಲ್ಲಿನ ನಿರ್ದೇಶಕ ಎಂ. ಕಾಶೀನಾಥ್ ಬಾಲಾಜಿ ಹೇಳಿದರು.
ನೋಡಲು ಬಂದರು
ಚೆನ್ನೈ (ಪಿಟಿಐ): ಇಂಡೋನೇಷ್ಯಾದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೂಕಂಪನದ ಸುದ್ದಿ ಭಯದ ಅಲೆಯನ್ನೇ ಹುಟ್ಟುಹಾಕಿದ್ದರೂ ಸುನಾಮಿ ನೋಡುವ ಕುತೂಹಲದಿಂದ ಚೆನ್ನೈನ `ಮರೀನಾ ಬೀಚ್~ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ಈ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ನಾವು ಸುನಾಮಿ ನೋಡಲು ಇಲ್ಲಿಗೆ ಬಂದಿದ್ದೇವೆ ಎಂದು ಹಿರಿಯ ಮಹಿಳೆಯೊಬ್ಬರು ಉತ್ಸಾಹದಿಂದ ಹೇಳಿದರು.
ಮನ್ಸೂಚನೆಯಂತೆ ಸಂಜೆ 5 ಗಂಟೆಯ ಹೊತ್ತಿಗೆ ಸುನಾಮಿ ಅಲೆಗಳು ಚೆನ್ನೈ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.