ADVERTISEMENT

ಕಾಂಗ್ರೆಸ್ ತೊರೆದ ಬಿಹಾರ ಎಂಎಲ್‌ಸಿಗಳು ಜೆಡಿಯುಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಪಟ್ನಾ: ಬಿಹಾರ ವಿಧಾನ ಪರಿಷತ್‌ನಲ್ಲಿನ ಕಾಂಗ್ರೆಸ್‌ನ ನಾಲ್ವರು ಸದಸ್ಯರು ಪಕ್ಷವನ್ನು ತೊರೆದು, ಗುರುವಾರ ಆಡಳಿತಾರೂಢ ಜೆಡಿಯು ಸೇರಿದ್ದಾರೆ.

‘ಜೆಡಿಯುವನ್ನು ತೊರೆದು, ಮಹಾಮೈತ್ರಿ ಕೂಟ ಸೇರುತ್ತೇವೆ’ ಎಂದು ಜೆಡಿಯುನ ಮಿತ್ರಪಕ್ಷ ಹಿಂದೂಸ್ತಾನಿ ಅವಾಮ್‌ ಮೋರ್ಚಾದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜೀತನ್‌ ರಾಮ್‌ ಮಾಂಝಿ ಬುಧವಾರವಷ್ಟೇ ಘೋಷಿಸಿದ್ದರು. ಅದರ ಮರುದಿನವೇ ಕಾಂಗ್ರೆಸ್‌ನ ನಾಯಕರು ತಮ್ಮ ಪಕ್ಷ ತೊರೆದಿದ್ದಾರೆ.

ಬಿಹಾರ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಅಶೋಕ್ ಚೌಹಾಣ್, ದಿಲೀಪ್ ಚೌಹಾಣ್, ರಾಮಚಂದ್ರ ಭಾರ್ತಿ ಮತ್ತು ತನ್ವೀರ್ ಅಖ್ತರ್ ಪಕ್ಷ ತೊರೆದ ಕಾಂಗ್ರೆಸ್ ಸದಸ್ಯರು. ಜೆಡಿಯು–ಆರ್‌ಜೆಡಿ–ಕಾಂಗ್ರೆಸ್ ಮಹಾಮೈತ್ರಿ ಸರ್ಕಾರದಲ್ಲಿ ಅಶೋಕ್ ಚೌಹಾಣ್ ಶಿಕ್ಷಣ ಸಚಿವರಾಗಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 67ನೇ ಜನ್ಮದಿನಾರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಈ ನಾಲ್ವರೂ ಜೆಡಿಯು ಸೇರಿದ್ದಾರೆ.

ADVERTISEMENT

ಬಿಹಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಆರು ಸದಸ್ಯರನ್ನು ಮಾತ್ರ ಹೊಂದಿದೆ. ಅವರಲ್ಲಿ ಈಗ ನಾಲ್ವರು ಪಕ್ಷ ತೊರೆದಿದ್ದಾರೆ. ಇವರ ಸಂಖ್ಯೆ ಒಟ್ಟು ಸದಸ್ಯರಲ್ಲಿ ಮೂರನೇ ಎರಡ
ರಷ್ಟು ಇರುವುದರಿಂದ ಅವರ ಮೇಲೆ ಪಕ್ಷಾಂತರ ತಡೆ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.