ADVERTISEMENT

ಕಾಂಗ್ರೆಸ್ ಮಾಧ್ಯಮ ವಿಭಾಗ ಮೇಲ್ವಿಚಾರಣೆಗೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಕಾಂಗ್ರೆಸ್ ಮಾಧ್ಯಮ ವಿಭಾಗ ಮೇಲ್ವಿಚಾರಣೆಗೆ ತಂಡ ರಚನೆ
ಕಾಂಗ್ರೆಸ್ ಮಾಧ್ಯಮ ವಿಭಾಗ ಮೇಲ್ವಿಚಾರಣೆಗೆ ತಂಡ ರಚನೆ   

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಭಾರತಕ್ಕೆ ಚೀನಾ ರಾಯಭಾರಿಯ ಜತೆ ಸಭೆ ನಡೆಸಿದ ಬಗ್ಗೆ ವೈರುಧ್ಯದ ಮಾಹಿತಿ ಬಿತ್ತರವಾಗಿ ಪಕ್ಷ ಮುಜುಗರಕ್ಕೆ  ತುತ್ತಾದ ಕಾರಣ, ಎಐಸಿಸಿ ಮಾಧ್ಯಮ ವಿಭಾಗದ ಮೇಲ್ವಿಚಾರಣೆಗೆ ಹಿರಿಯ ನಾಯಕರು ಇರುವ  ತಂಡ ರಚನೆ ಮಾಡಲಾಗಿದೆ.

‘ಮಲ್ಲಿಕಾರ್ಜುನ ಖರ್ಗೆ, ಪಿ. ಚಿದಂಬರಂ, ಆನಂದ ಶರ್ಮಾ, ಗುಲಾಂ ನಬಿ ಆಜಾದ್  ಅವರು ಸೇರಿ ಎಂಟು ಜನರಿರುವ ತಂಡವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚಿಸಿದ್ದಾರೆ. ಈ ತಂಡವು  ಪಕ್ಷದ ಮಾಧ್ಯಮ ವಿಭಾಗದ ಪ್ರತಿದಿನದ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇರಿಸಲಿದ್ದು, ಅಗತ್ಯ ಸಲಹೆಗಳನ್ನು ನೀಡಲಿದೆ ಎಂದು ಮೂಲಗಳು ಹೇಳಿವೆ.

‘ಜತೆಗೆ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಜಾರ್ಖಂಡ್ ಮತ್ತು ಛತ್ತೀಸಗಡದ ಉಸ್ತುವಾರಿ ಹುದ್ದೆಯಿಂದ ತೆರವು ಮಾಡಲಾಗಿದೆ ’ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.