ADVERTISEMENT

ಕಾನೂನು ವಿದ್ಯಾರ್ಥಿ ಮೇಲೆ ಹಲ್ಲೆ; ಸಾವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಪಾರ್ಕಿಂಗ್‌ ವಿಷಯದಲ್ಲಿ ಆರಂಭ­ವಾದ ಚಿಕ್ಕ ಜಗಳ ಸಾವಿನಲ್ಲಿ ಅಂತ್ಯ­ಗೊಂಡ
ಘಟನೆ ದೆಹಲಿಯ ಕಾನೂನು ಕಾಲೇಜು ಆವರಣದಲ್ಲಿ ನಡೆದಿದೆ.

ಆಯುಷ್‌ (22) ಮೃತಪಟ್ಟ ವಿದ್ಯಾರ್ಥಿ. ಈತ ಕಾಲೇಜಿನ ಮುಂದೆ ತನ್ನ ಮೊಬೈಕನ್ನು ನಿಲ್ಲಿಸಲು ಹೋದಾಗ ಇತರೆ ಇಬ್ಬರು ವಿದ್ಯಾರ್ಥಿಗಳಾದ ಅಮಿತ್‌ ನರಾರ್‌ ಮತ್ತು ತನುಜ್‌ ತಿವಾರಿಯೊಂದಿಗೆ ಜಗಳವಾಗಿದೆ. ಆಗ ಇವರಿಬ್ಬರು ಆಯುಷ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಇದರಿಂದ ತೀವ್ರ ಅಸ್ವಸ್ಥಗೊಂಡ ಆಯುಷ್‌­ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿ ವೈದ್ಯರು ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ಬೇರೆ ಆಸ್ಪತ್ರೆಯಲ್ಲಿ ಆಯುಷ್‌ನನ್ನು ದಾಖಲಿಸಿದ್ದರೂ ಸಹ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್‌ ಭಯೋತ್ಪಾದನೆ: ಭಾರತದ ಆತಂಕ
ನವದೆಹಲಿ (ಪಿಟಿಐ):
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ತೀವ್ರ ಆತಂಕವಿದೆ. ಆದರೆ ಭಯೋತ್ಪಾದನೆಗೆ ಭಯೋತ್ಪಾದನೆಯೇ ಉತ್ತರವಲ್ಲ ಎಂದು ಭಾರತ ಹೇಳಿದೆ.

ಸಂದರ್ಭಾನುಸಾರ ನಾವು ಸಾಧ್ಯವಾದಷ್ಟು ಮಟ್ಟಿಗೆ ಸೂಕ್ತ ರೀತಿಯಲ್ಲಿ ಪಾಕಿಸ್ತಾನದ ಜತೆ ವ್ಯವಹರಿಸಬೇಕಿದೆ  ಎಂದು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.