ನವದೆಹಲಿ (ಪಿಟಿಐ): ಕಲ್ಲಿದ್ದಲು ಗಣಿಗಾರಿಕೆಗೆ ನೀಡಿದ ಮಂಜೂರಾತಿಯಿಂದ ಬೊಕ್ಕಸಕ್ಕೆ 10.67 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಹಾಲೇಖಪಾಲರ ವರದಿ ಹೇಳಿರುವ ಬೆನ್ನಲ್ಲಿಯೇ, ಅನುಮತಿ ಪಡೆದೂ ಕಾರ್ಯ ನಿರ್ವಹಿಸದ ಗಣಿ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲು ಸರ್ಕಾರ ಮುಂದಾಗಿದೆ.
`ಎನ್‌ಟಿಪಿಸಿ, ಎಸ್‌ಎಐಎಲ್, ಜಿಂದಾಲ್ ಸ್ಟೀಲ್ ಅಂಡ್ ಪವರ್, ಜಿವಿಕೆ ಪವರ್ ಸೇರಿದಂತೆ ಸುಮಾರು 58 ಕಂಪೆನಿಗಳಿಗೆ ಷೋಕಾಸ್ ನೋಟಿಸ್ ನೀಡಲಾಗುತ್ತದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಬಿಡುಗಡೆ
ಫೂಲ್‌ಬನಿ (ಒಡಿಶಾ): ಕಂಧಮಲ್ ಜಿಲ್ಲೆಯಲ್ಲಿ 2007- 08ರಲ್ಲಿ ನಡೆದಿದ್ದ ಮತೀಯ ಗಲಭೆಗಳಿಗೆ ಸಂಬಂಧಿಸಿದ 156 ಆರೋಪಿಗಳನ್ನು, ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಎರಡು ತ್ವರಿತಗತಿಯ ನ್ಯಾಯಾಲಯಗಳು ಪ್ರತ್ಯೇಕ ತೀರ್ಪಿನಲ್ಲಿ ಬಿಡುಗಡೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.