ಶ್ರೀನಗರ(ಐಎಎನ್ಎಸ್/ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಹಿಮಪಾತದಿಂದ ಉಂಟಾದ ಹಿಮಕುಸಿತದಿಂದಾಗಿ ಇಬ್ಬರು ಯೋಧರು ಸೇರಿ 12 ಜನರು ಮೃತಪಟ್ಟಿದ್ದಾರೆ.
ಅಲ್ಲದೇ, ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಮನೆಗಳು ಕುಸಿದಿರುವ ಕುರಿತು ವರದಿಯಾಗಿದೆ.
ಅಕಾಲಿಕ ಹಿಮಪಾತದಿಂದ ಕಾಶ್ಮೀರದ ವಿವಿಧೆಡೆ ಸಿಲುಕಿಕೊಂಡಿದ್ದ 100 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಇಷ್ಟೇ ಅಲ್ಲದೇ ಹಿಮಪಾತದ ತೀವ್ರತೆಗೆ ಸುಮಾರು 150 ಮನೆಗಳು ಜಖಂಗೊಂಡಿವೆ.
ಕಾರ್ಗಿಲ್‌ನ ಲಡಾಖ್ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 82 ಫೀಲ್ಡ್ ರೆಜಿಮೆಂಟ್ನ ಯೋಧರಾದ ನಾಯಕ್ ವಿಜಯ್ ಪ್ರಸಾದ್, ಧರ್ಮೇಂದ್ರ ಸಿಂಗ್ ಅವರು ಹಿಮಕುಸಿತದಲ್ಲಿ ಮೃತಪಟ್ಟವರು.
ಇವರಿಬ್ಬರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ರಾಜ್ಯದ ವಿವಿಧೆಡೆ ಹಿಮಕುಸಿತವಾಗುವ ಸಾಧ್ಯತೆ ಇದೆ. ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.