ನವದೆಹಲಿ, (ಪಿಟಿಐ): ಐದು ದಶಕಗಳಿಂದ ಖಳನಟರಾಗಿ ತೆರೆಯ ಮೇಲೆ ವಿಜೃಂಭಿಸಿದ ಬಾಲಿವುಡ್ ನಟ ಪ್ರೇಮ್ ಚೋಪ್ರಾ ಅವರ ಮಾನವೀಯ ಗುಣ ಮತ್ತು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮದರ್ ತೆರೆಸಾ ಪ್ರಶಸ್ತಿ ನೀಡಲಾಗಿದೆ. 76ರ ಹರೆಯದ ಚೋಪ್ರಾ ಅವರು ಐದು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕೇವಲ ನಟರಾಗಿ ಮಾತ್ರ ಉಳಿಯದ ಅವರು ನಟನೆಯ ಹೊರತಾಗಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರ ಏಳ್ಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮದರ್ ತೆರೆಸಾ ಅವರಂಥ ಸಂತರ ಹೆಸರಿನ ಪ್ರಶಸ್ತಿ ಪಡೆಯಲು ಸಂತೋಷವಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಮಾರ್ಚ್ 3ರಂದು ಕೋಲ್ಕತ್ತದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.