ADVERTISEMENT

ಗಡಿಯಲ್ಲಿ ಪಾಕ್ ವ್ಯಕ್ತಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಜಮ್ಮು (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದಿಂದ ಗುರುವಾರ ಬೆಳಿಗ್ಗೆ ಅಕ್ರಮವಾಗಿ ಒಳನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮಾಲಾ ಬಾಲಾ ಬಳಿ ಈತ ಗಡಿ ರೇಖೆ ಮೂಲಕ ಭಾರತೀಯ ಭೂಪ್ರದೇಶ ದಾಟುತ್ತಿದ್ದ. ಕೂಡಲೇ ಅಧಿಕಾರಿಗಳು ಈತನನ್ನು ಪ್ರಶ್ನಿಸಿದರೂ ಅದಕ್ಕೆ ಸೊಪ್ಪು ಹಾಕದೇ ಮುಂದೆ ಹೋಗಲು ಯತ್ನಿಸಿದಾಗ ಅವನಿಗೆ ಗುಂಡಿಕ್ಕಲಾಯಿತು ಎಂದು ಗಡಿ ಭದ್ರತಾ ಪಡೆ ಅಧಿಕಾರಿ ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.