ADVERTISEMENT

ಗ್ರಾಮಗಳು ತ್ಯಾಜ್ಯ, ಬಯಲುಶೌಚ ಮುಕ್ತ ಆಗದೆ ಉಚಿತ ಅಕ್ಕಿ ಇಲ್ಲ: ಕಿರಣ್‌ ಬೇಡಿ

ಏಜೆನ್ಸೀಸ್
Published 29 ಏಪ್ರಿಲ್ 2018, 2:03 IST
Last Updated 29 ಏಪ್ರಿಲ್ 2018, 2:03 IST
ಕಿರಣ್‌ ಬೇಡಿ (ಸಂಗ್ರಹ ಚಿತ್ರ)
ಕಿರಣ್‌ ಬೇಡಿ (ಸಂಗ್ರಹ ಚಿತ್ರ)   

ಪುದುಚೆರಿ: ಗ್ರಾಮಗಳು ತ್ಯಾಜ್ಯ, ಬಯಲುಶೌಚಮುಕ್ತ ಆಗದಿದ್ದರೆ ಉಚಿತ ಅಕ್ಕಿ ಪೂರೈಕೆ ಸ್ಥಗಿತಗೊಳಿಸುವ ಬಗ್ಗೆ ಪುದುಚೆರಿ ಲೆಫ್ಟಿನೆಂಟ್ ಗೌವರ್ನರ್ ಕಿರಣ್ ಬೇಡಿ ಟ್ವೀಟ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ತಮ್ಮ ವ್ಯಾಪ್ತಿಯ ಗ್ರಾಮಗಳು ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಬಯಲುಶೌಚ ಮುಕ್ತ ಎಂದು ಶಾಸಕರು, ಸ್ಥಳೀಯಾಡಳಿತ ಪ್ರಮಾಣೀಕರಿಸಿದರೆ ಮಾತ್ರ ಉಚಿತ ಅಕ್ಕಿ ಪೂರೈಕೆ ಮಾಡಲಾಗುವುದು. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೇ ಉಚಿತ ಅಕ್ಕಿ ಪೂರೈಕೆಯಾಗುತ್ತಿದ್ದು, ಬೆಳಿಗ್ಗೆಯ ಸುತ್ತಾಟದ ಸಂದರ್ಭ ಕಂಡು ಬಂದ ದೃಶ್ಯವಿದು’ ಎಂದು ತ್ಯಾಜ್ಯದ ರಾಶಿಗಳ ಚಿತ್ರವನ್ನು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT