ADVERTISEMENT

ಚೀನಿ ಸೈನಿಕರಿಗೆ ’ನಮಸ್ತೆ’ ಪದದ ಅರ್ಥ ವಿವರಿಸಿದ ನಿರ್ಮಲಾ ಸೀತಾರಾಮನ್

ಏಜೆನ್ಸೀಸ್
Published 8 ಅಕ್ಟೋಬರ್ 2017, 12:00 IST
Last Updated 8 ಅಕ್ಟೋಬರ್ 2017, 12:00 IST
ಚೀನಿ ಸೈನಿಕರಿಗೆ ’ನಮಸ್ತೆ’ ಪದದ ಅರ್ಥ ವಿವರಿಸಿದ ನಿರ್ಮಲಾ ಸೀತಾರಾಮನ್
ಚೀನಿ ಸೈನಿಕರಿಗೆ ’ನಮಸ್ತೆ’ ಪದದ ಅರ್ಥ ವಿವರಿಸಿದ ನಿರ್ಮಲಾ ಸೀತಾರಾಮನ್   

ನವದೆಹಲಿ:  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಡೋ –ಚೀನಾ ಗಡಿ ಪ್ರದೇಶ ನಾತೂ–ಲಾಗೆ ಭಾನುವಾರ ಭೇಟಿ ನೀಡಿದ ವೇಳೆ ಅಲ್ಲಿನ ಚೀನಾ ಸೈನಿಕರಿಗೆ ನಮಸ್ತೆ ಎಂಬ ಪದದ ಅರ್ಥ ಏನು ಎಂಬುದನ್ನು ತಿಳಿಸಿದ್ದಾರೆ.

ಚೀನಾ ಸೈನಿಕರಿಗೆ ಅರ್ಥ ಮನವರಿಕೆ ಮಾಡಿಕೊಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇದೇ ವೇಳೆ  ನಿರ್ಮಲಾ ಸೀತಾರಾಮನ್ ಅವರು, ನಾನು ನಾತೂ–ಲಾಗೆ ಭೇಟಿ ನೀಡಿದ ಸಂದರ್ಭ ಚೀನಾ ಸೈನಿಕರೊಂದಿಗೆ ನಡೆಸಿದ ಮಾತುಕತೆ ನಡೆಸುತ್ತಿದ್ದ ವೇಳೆ ತೆಗೆದ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT