ADVERTISEMENT

ಟಿಕೆಟ್ ದರ ಏರಿಕೆಗೆ ಮಮತಾ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 12:45 IST
Last Updated 14 ಮಾರ್ಚ್ 2012, 12:45 IST

ನಂದಿಗ್ರಾಮ (ಪಿಟಿಐ): ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕ ರೈಲು ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ ಅವರು ದರ ಏರಿಕೆಯನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

 ಅಲ್ಲದೆ ಬೆಲೆ ಏರಿಸಲು ತಾವು ಬಿಡುವುದೂ ಇಲ್ಲ ಎಂದು ಹೇಳುವ ಮೂಲಕ ದೀದಿ ಯುಪಿಎ ನಲ್ಲಿ ಹೊಸದೊಂದು ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ.

ತಮಗೆ ಟಿಕೆಟ್ ದರ ಏರಿಕೆ ಕುರಿತು ಮೊದಲೇ ಗೊತ್ತಿರಲಿಲ್ಲ ಎಂದಿರುವ ಅವರು ಜನಸಾಮಾನ್ಯರ ಮೇಲೆ ಹೊರೆಯಾಗುವಂತಹ ಟಿಕೆಟ್ ದರ ಏರಿಕೆಯನ್ನು ಜಾರಿಯಾಗಲು ಬಿಡುವುದಿಲ್ಲ ಎಂಬ ಆಶ್ವಾಸನೆಯನ್ನು ಜನತೆಗೆ ನೀಡಿದ್ದಾರೆ.

ಅವರು ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಈಗಾಗಲೇ ತೃಣಮೂಲ ಕಾಂಗ್ರೆಸ್‌ನ ಸಂಸದೀಯ ಘಟಕವು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರೊಂದಿಗೆ ಟಿಕೆಟ್ ದರ ಏರಿಕೆಯ ವಿಚಾರದ ಬಗೆಗೆ ಚರ್ಚೆ ಆರಂಭಿಸಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.