ADVERTISEMENT

ಟ್ವಿಟರ್‌ ಹ್ಯಾಂಡಲ್‌ ಬದಲಾಯಿಸಿದ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 17:03 IST
Last Updated 17 ಮಾರ್ಚ್ 2018, 17:03 IST
ರಾಹುಲ್‌ ಗಾಂಧಿ ಅವರ ಹೊಸ ಟ್ವಿಟರ್‌ ಹ್ಯಾಂಡಲ್ (ಎಡ ಚಿತ್ರ) ಮತ್ತು ಹಳೆಯದು (ಚಿತ್ರ ಕೃಪೆ – ಟ್ವಿಟರ್)
ರಾಹುಲ್‌ ಗಾಂಧಿ ಅವರ ಹೊಸ ಟ್ವಿಟರ್‌ ಹ್ಯಾಂಡಲ್ (ಎಡ ಚಿತ್ರ) ಮತ್ತು ಹಳೆಯದು (ಚಿತ್ರ ಕೃಪೆ – ಟ್ವಿಟರ್)   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್‌ ಹ್ಯಾಂಡಲ್ ಅನ್ನು ಶನಿವಾರ ಬೆಳಿಗ್ಗೆ ಬದಲಾಯಿಸಲಾಗಿದೆ.

ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದ ಸಂದರ್ಭದಲ್ಲೇ ಹೊಸ ಟ್ವಿಟರ್‌ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ನನ್ನ ಟ್ವಿಟರ್ ಹ್ಯಾಂಡಲ್‌ ಅನ್ನು ಇವತ್ತು ಬೆಳಿಗ್ಗೆ 9 ಗಂಟೆಯಿಂದ @RahulGandhi ಎಂದು ಬದಲಾಯಿಸಲಾಗಿದೆ. @OfficeOfRG ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳನ್ನು ಎದುರುನೋಡುತ್ತಿದ್ದೇನೆ. ಟ್ವಿಟರ್ ಮತ್ತು ಇತರ ತಾಣಗಳಲ್ಲಿ ನನ್ನ ಸಂಭಾಷಣೆ ಮುಂದುವರಿಸಲಿದ್ದೇನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.