ADVERTISEMENT

ಡಿಎಂಕೆ ಸಂಬಂಧ ಕಡಿದರೆ ಕಾಂಗ್ರೆಸ್ ಮೈತ್ರಿ ಪರಿಶೀಲನೆ: ಜಯಲಲಿತಾ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:45 IST
Last Updated 14 ಜೂನ್ 2011, 10:45 IST

ನವದೆಹಲಿ (ಪಿಟಿಐ): ತನ್ನ ಮಿತ್ರಪಕ್ಷ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡರೆ ಆ ಬಳಿಕ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುವ ಸುಳಿವನ್ನು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಇಲ್ಲಿ ನೀಡಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಡಿಎಂಕೆ ಇನ್ನೂ ಮಿತ್ರ ಪಕ್ಷಗಳಾಗಿರುವುದರಿಂದ ಮತ್ತು ಅವುಗಳು ಕೇಂದ್ರದಲ್ಲಿ ಇನ್ನೂ ಅಧಿಕಾರ ಹಂಚಿಕೆ ಮುಂದುವರೆಸಿರುವುದರಿಂದ ಸೋನಿಯಾ ಗಾಂಧಿ ಅವರನ್ನು ತಾವು ಭೇಟಿ ಮಾಡುವುದು ಸರಿಯಾಗುವುದಿಲ್ಲ ಎಂದು ಹೇಳಿದರು.

~ಕಾಂಗ್ರೆಸ್ ದುರ್ಬಲವಾಗಿರುವುದರಿಂದ ಅದರ ಜೊತೆಗೆ ಮೈತ್ರಿಗೆ ನೀವು ಹಿಂದೇಟು ಹಾಕುತ್ತಿದ್ದೀರಾ?~ ಎಂಬುದಾಗಿ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ~ಯಾರಿಗಾದರೂ ನನ್ನ ಬೆಂಬಲ ಬೇಕಾಗಿದ್ದರೆ, ಅವರು ನನ್ನನ್ನು ಕೇಳಬೇಕು. ನೀವು ಅವರ ಪರವಾಗಿ ಕೇಳುವಂತಿಲ್ಲ~ ಎಂದು ಜಯಲಲಿತಾ ಉತ್ತರಿಸಿದರು.

ಕಳೆದ ತಿಂಗಳು ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲಿಯೇ ಸೋನಿಯಾಗಾಂಧಿಯವರು ಜಯಲಲಿತಾ ಅವರನ್ನು ಸಂಪರ್ಕಿಸಿ ಅಭಿನಂದನೆಗಳನ್ನು ಹೇಳಿದ್ದರಿಂದ ಕೇಳಿಬಂದ ರಾಜಕೀಯ ಊಹಾಪೋಹಗಳ ಕಾರಣ ಪತ್ರಕರ್ತರು ಉಭಯ ಪಕ್ಷಗಳ ಮೈತ್ರಿ ಸಾಧ್ಯತೆ ಬಗ್ಗೆ ಜಯಲಲಿತಾಗೆ ಪ್ರಶ್ನೆಗಳ ಸುರಿಮಳೆಗೈದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.