ADVERTISEMENT

ತಂಬಾಕು ಸೇವಿಸುವ ಯುವ ಜನರ ಪ್ರಮಾಣದಲ್ಲಿ ಇಳಿಕೆ

ಏಜೆನ್ಸೀಸ್
Published 9 ಜೂನ್ 2017, 4:38 IST
Last Updated 9 ಜೂನ್ 2017, 4:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಒಟ್ಟು ತಂಬಾಕು ಸೇವಿಸುವವರ ಸಂಖ್ಯೆಯಲ್ಲಿ 81 ಲಕ್ಷದಷ್ಟು ಇಳಿಕೆಯಾಗಿರುವುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ಪೈಕಿ ತಂಬಾಕು ಸೇವಿಸುವ ಯುವಜನರ ಪ್ರಮಾಣ ಕಳೆದ ಕೆಲ ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

15 ವರ್ಷ ವಯಸ್ಸಿನಿಂದ 24 ವರ್ಷ ವಯಸ್ಸಿನ ಒಳಗಿನ ತಂಬಾಕು ಸೇವಿಸುವವರ ಪ್ರಮಾಣ 2016–17ನೇ ಸಾಲಿನಲ್ಲಿ ಶೇಕಡ 12.4ಕ್ಕೆ ಇಳಿಕೆಯಾಗಿದೆ. ಇದು 2009–10ರಲ್ಲಿ ಶೇಕಡ 18.4ರಷ್ಟಿತ್ತು.

‘ತಂಬಾಕು ಸೇವಿಸುವ ಯುವಜನರ ಪ್ರಮಾಣ ಇಳಿಕೆಯಾಗಿರುವುದು ಸಂತಸ ಮೂಡಿಸಿದೆ’ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಜಾಗತಿಕ ತಂಬಾಕು ನಿಯಂತ್ರಣಕ್ಕಾಗಿನ ‘ವಿಶೇಷ ಗುರುತಿಸುವಿಕೆ’ ಪ್ರಶಸ್ತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ ನಿರ್ದೇಶಕರಿಂದ ಅವರು ಸ್ವೀಕರಿಸಿದ್ದಾರೆ.

ADVERTISEMENT

ಆದಾಗ್ಯೂ, ದೇಶದಲ್ಲಿ ತಂಬಾಕು ಸೇವಿಸುವವರ ಹೆಚ್ಚಿದೆ. 20 ಕೋಟಿಗೂ ಹೆಚ್ಚು ಜನ ತಂಬಾಕು ಮತ್ತು ತಂಬಾಕಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುತ್ತಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.