
ಪ್ರಜಾವಾಣಿ ವಾರ್ತೆ
ಪಣಜಿ (ಪಿಟಿಐ): ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್ ತೇಜ್-ಪಾಲ್ ಪೊಲೀಸ್ ಕಸ್ಟಡಿಯನ್ನು ಮತ್ತೆ 4 ದಿನಗಳ ಕಾಲ ವಿಸ್ತರಿಸಲಾಗಿದೆ.
6 ದಿನಗಳ ವಶದ ಅವಧಿ ಕೊನೆಗೊಂಡ ಬಳಿಕ ಗೋವಾ ಪೊಲೀಸರು ಶನಿವಾರ ತೇಜ್‌ಪಾಲ್ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಿದರು.
ಆರೋಪಿ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆಗಾಗಿ ಇನ್ನಷ್ಟು ಕಾಲಾವಕಾಶ ನೀಡುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ತೇಜ್‌ಪಾಲ್ ಅವರ ಕಸ್ಟಡಿಯನ್ನು ಡಿ. 10ರ ವರೆಗೆ ವಿಸ್ತರಿಸಿತು.
ಶೋಮಾ ಚೌಧರಿ ಹೇಳಿಕೆ: ‘ತೆಹೆಲ್ಕಾ’ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರ ಹೇಳಿಕೆಯನ್ನು ನ್ಯಾಯಲಯವು ದಾಖಲಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.