ಪಣಜಿ (ಪಿಟಿಐ): ‘ತರುಣ್ ತೇಜಪಾಲ್‌್ ವಿರುದ್ಧದ ಅತ್ಯಾಚಾರ ಪ್ರಕರಣದ ಸಿಸಿಟಿವಿ ದೃಶ್ಯಗಳನ್ನು ಅವರ ಕುಟುಂಬದವರು ಎಲ್ಲರಿಗೂ ತೋರಿಸಿದ್ದಾರೆ’ ಎಂದು ಗೋವಾ ಅಪರಾಧ ವಿಭಾಗದ ಪರ ವಕೀಲ ಸುರೇಶ್‌್ ಲೋಟಿಕರ್‌್ ಬಾಂಬೆ ಹೈಕೋರ್ಟ್‌್ ಗೋವಾ ಪೀಠಕ್ಕೆ ತಿಳಿಸಿದರು.
ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜಾಮೀನು ಕೋರಿ ತೇಜಪಾಲ್‌್ ಸಲ್ಲಿಸಿದ್ದ ಅರ್ಜಿಗೆ ಲೋಟಿಕರ್‌್ ತಕರಾರು ತೆಗೆದರು.
ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕೋರ್ಟ್‌್ ಮಾರ್ಚ್‌್ 14ಕ್ಕೆ ಕಾದಿರಿಸಿದೆ.
ತೇಜಪಾಲ್‌್ ವಕೀಲರ ವಾದ: ‘ತೇಜಪಾಲ್‌್ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಗೋವಾದ ಪಂಚತಾರಾ ಹೊಟೆಲ್‌್ ಲಿಫ್ಟ್‌್ ಹೊರಗೆ ಇರುವ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ನೋಡಿದರೆ ತಿಳಿಯುತ್ತದೆ’ ಎಂದು ತೇಜಪಾಲ್‌್ ಪರ ವಕೀಲ ಹೇಳಿದ್ದಾರೆ
‘ಲಿಫ್ಟ್‌ನಿಂದ ಇಳಿದ ಬಳಿಕ ಯುವತಿ ಮುಖದಲ್ಲಿ ಖುಷಿ ಕಾಣುತ್ತಿತ್ತು’ ಎಂದು ದೇಸಾಯಿ ಹೇಳಿದರು.
ಜಾಮೀನು ಅರ್ಜಿ ವಿಚಾರಣೆ ವೇಲೆ ತೇಜಪಾಲ್‌್ ಕೂಡ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೋರ್ಟ್ನಲ್ಲಿ ಹಾಜರಿದ್ದರು.
ಜೈಲಿನಿಂದಲೇ ಮಹಿಳೆಗೆ ಕರೆ
ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೇಜಪಾಲ್‌್ ಅವರು ಜೈಲಿನಿಂದಲೇ ದೆಹಲಿ ಮೂಲದ ಮಹಿಳಾ ಸಹೋದ್ಯೋಗಿಗೆ ನಿರಂತರವಾಗಿ ಮೊಬೈಲ್‌ನಿಂದ ಕರೆ ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಜೈಲು ಅಧಿಕಾರಿಗಳು ತನಿಖಾ ವರದಿಯನ್ನು ಬುಧವಾರ ಮಾರ್ಗೊವಾ ಜಿಲ್ಲಾ ಹಾಗೂ ಸೆಷನ್ಸ್‌್ ಕೋರ್ಟ್‌ಗೆ ಸಲ್ಲಿಸಿದರು.
‘ತೇಜಪಾಲ್‌್ ಅವರ ಅಂಗಿ ಕಾಲರ್‌ನಲ್ಲಿ ಮೊಬೈಲ್‌್ ಸಿಮ್‌್ ಕಾರ್ಡ್‌್ ಸಿಕ್ಕಿದೆ. 7350533170 ನಂಬರಿನ ಈ ಮೊಬೈಲ್‌್ ಫೋನ್‌್ ಪಣಜಿಯ ತಲೈಗೋವಾದ ತೆರೆಸಾ ಎಂಬುವರ ಹೆಸರಿನಲ್ಲಿದೆ.
ಇದೇ ಫೋನ್‌ನಿಂದ ತೇಜಪಾಲ್‌್, ದೆಹಲಿಯ ಶೀಲಾ ಲುಂಕಡ್‌್ ಎಂಬ ಮಹಿಳೆಗೆ ಸದಾ ಕರೆ ಮಾಡುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಲಾ ಲುಂಕಡ್‌್, ರಾಜೀವ್‌್ ಲುಂಕಡ್, ತರುಣ್‌್ ತೇಜಪಾಲ್‌್ ಹಾಗೂ ಅವರ ಪತ್ನಿ ಗೀತನ್‌್ ಬಾತ್ರಾ ಖಾಸಗಿ ಕಂಪೆನಿಯೊಂದರ ಪಾಲುದಾರರು.
‘ಶೀಲಾ ಮಾತ್ರವಲ್ಲ, ದೆಹಲಿಯ ಸಾಕೇತ್‌್ ಪ್ರದೇಶದ ಮಂಜಿರಿ ಎಂಬ ಮಹಿಳೆಗೂ ತೇಜಪಾಲ್‌್ ಕರೆ ಮಾಡುತ್ತಿದ್ದರು. ದೆಹಲಿಯಲ್ಲಿ ಇನ್ನೂ ಕೆಲವರಿಗೆ ಅವರು ಕರೆ ಮಾಡಿದ್ದಾರೆ. ಇದರ ವಿವರಗಳನ್ನು ನೀಡುವಂತೆ ಮೊಬೈಲ್‌್ ಸೇವಾ ಸಂಸ್ಥೆಗಳಿಗೆ ಪತ್ರ ಬರೆಯುತ್ತಿದ್ದೇವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ತೇಜಪಾಲ್‌್ ಪ್ರತಿಕ್ರಿಯೆ: ಜೈಲಿನಲ್ಲಿ ಮೊಬೈಲ್‌್ ಫೋನ್‌್ ಇಟ್ಟುಕೊಂಡಿರಲೇ ಇಲ್ಲ ಎಂದು ತೇಜಪಾಲ್‌್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.