ADVERTISEMENT

ದಲೈಲಾಮಾಗೆ ಹೆಚ್ಚಿನ ಭದ್ರತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಧರ್ಮಶಾಲಾ (ಐಎಎನ್‌ಎಸ್) :  ಬೋಧಗಯಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ಟಿಬೆಟ್‌ನ ಬೌದ್ಧ ಧರ್ಮದ ಪರಮೋಚ್ಛ ಗುರು ದಲೈಲಾಮಾ ಅವರಿಗೆ ಭದ್ರತೆಯನ್ನು ಹೆಚ್ಚಿಸಿರುವುದಾಗಿ ಅವರ ಖಾಸಗಿ ಕಚೇರಿ ತಿಳಿಸಿದೆ.

ದಲೈಲಾಮಾ ಅವರ ಭದ್ರತಾ ಅಧಿಕಾರಿಗಳಿಗೆ ಸಲಹಾ ಮಂಡಳಿಯನ್ನು ನೇಮಿಸಲಾಗಿದೆ ಎಂದು ಟಿಬೆಟ್‌ನ ಕೇಂದ್ರಿಯ ಆಡಳಿತ ವಿಭಾಗದ ಭದ್ರತಾ ಕಾರ್ಯದರ್ಶಿ ಎನ್ಗೋಡಪ್ ಡೋರ್ಜಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಈಗಾಗಲೇ ಭಾರತ ಸರ್ಕಾರವು ಅವರಿಗೆ ಝಡ್-ಪ್ಲಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು ನಾವು ಅವರ ಕಚೇರಿ ಹಾಗು ತ್ಸುಗ್ಲಗ್‌ಖಾಂಗ್ ದೇವಾಲಯಕ್ಕೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿರುವುದಾಗಿ ಅವರು ತಿಳಿಸಿದರು.

ಭಾರತದಲ್ಲಿನ ದೇವಾಲಯ ಹಾಗೂ ಮಠಗಳ ಭದ್ರತೆಯನ್ನು ಪರಿಶೀಲಿಸಲು ಟಿಬೆಟ್ ಸರ್ಕಾರದ ಕೇಂದ್ರ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ್ದಾಗಿ ಡೋರ್ಜಿ ತಿಳಿಸಿದರು. ಸದ್ಯ ಕರ್ನಾಟಕದಲ್ಲಿರುವ ದಲೈಲಾಮಾ ಬೈಲಕುಪ್ಪೆಯಲ್ಲಿ ಏರ್ಪಡಿಸಲಾಗಿದ್ದ ತಮ್ಮ 78ನೇ ಹುಟ್ಟು ಹಬ್ಬ ಸಮಾರಂಭದಲ್ಲಿ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.