ADVERTISEMENT

ದೆಹಲಿ ಸ್ಫೋಟ ಮೃತರ ಸಂಖ್ಯೆಕ್ಕೆ 12 ಏರಿಕೆ, ಇ-ಮೇಲ್ ಮೂಲ ಜಮ್ಮು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 6:10 IST
Last Updated 8 ಸೆಪ್ಟೆಂಬರ್ 2011, 6:10 IST

ಜಮ್ಮು (ಪಿಟಿಐ): ದೆಹಲಿಯ ಹೈಕೋರ್ಟ್ ಹತ್ತಿರ ನಡೆದ ಬಾಂಬ್ ಸ್ಫೋಟಕ್ಕೆ ತಾನೆ ಹೊಣೆ ಎಂದು ಹೇಳಿಕೊಂಡು ಹುಜಿ (ಹರ್ಕತ್ -ಉಲ್- ಜಿಹಾದಿ) ಸಂಘಟನೆಯಿಂದ ಮಾಧ್ಯಮಗಳ ಕಚೇರಿಗೆಳಿಗೆ ಬಂದ ಇ- ಮೇಲ್ ಜಮ್ಮು ಕಾಶ್ಮೀರದ ಕಿಷ್ಟಾವರ್ ಜಿಲ್ಲೆಯಿಂದ ಬಂದಿದ್ದು ಎಂದು ತನಿಖಾಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ.

ದೆಹಲಿಯ ಹೈಕೋರ್ಟ್ ಬಳಿ ಬುಧವಾರ ಬೆಳಿಗ್ಗೆ ನಡೆದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದರು. ಗುರುವಾರ ಇನ್ನೊಬ್ಬರು ಮೃತಪಟ್ಟು ಮೃತರ ಸಂಖ್ಯೆ 12ಕ್ಕೆ ಏರಿದೆ. ಸ್ಫೋಟದಲ್ಲಿ ಗಾಯಗೊಂವರಲ್ಲಿ ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಬುಧವಾರದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಗುರುವಾರ ಕೋರ್ಟ್ ನಲ್ಲಿ ಎಂದಿನಂತೆ ಕಲಾಪಗಳು ನಡೆಯುತ್ತಿದೆ.

ಈ ನಡುವೆ ಸ್ಫೋಟ ನಡೆದ ಮರುದಿನ ಗುರುವಾರ ಬೆಳಿಗ್ಗೆ ಗೃಹ ಸಚಿವ ಚಿದಂಬರಂ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ), ಬೇಹುಗಾರಿಕಾ ದಳ (ಐಬಿ) ಮತ್ತು ಸಂಶೋಧನ ಮತ್ತು ವಿಶ್ಲೇಸಣಾ ಘಟಕ (ಆರ್ ಎ ಡಬ್ಲ್ಯು)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.