ADVERTISEMENT

ನವೆಂಬರ್‌ 8ಕ್ಕೆ ಕೇಂದ್ರ ಸರ್ಕಾರದಿಂದ ‘ಕಪ್ಪುಹಣ ವಿರೋಧಿ ದಿನ’ ಆಚರಣೆ

ಏಜೆನ್ಸೀಸ್
Published 25 ಅಕ್ಟೋಬರ್ 2017, 11:44 IST
Last Updated 25 ಅಕ್ಟೋಬರ್ 2017, 11:44 IST
ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)   

ನವದೆಹಲಿ: ದೊಡ್ಡ ಮುಖ ಬೆಲೆಯ ನೋಟು ರದ್ದು ನಿರ್ಧಾರ ಪ್ರಕಟಿಸಿದ ದಿನವಾದ ನವೆಂಬರ್‌ 8 ಅನ್ನು ಕೇಂದ್ರ ಸರ್ಕಾರ ‘ಕಪ್ಪುಹಣ ವಿರೋಧಿ ದಿನ’ವಾಗಿ ಆಚರಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

ನವೆಂಬರ್ 8 ಅನ್ನು ‘ಕರಾಳ ದಿನ’ ಎಂದು ಆಚರಿಸುವುದಾಗಿ ವಿರೋಧ ಪಕ್ಷಗಳು ಹೇಳಿಕೆ ನೀಡಿದ ಬೆನ್ನಲ್ಲೇ ಜೇಟ್ಲಿ ಈ ಘೋಷಣೆ ಮಾಡಿದ್ದಾರೆ.

ನೋಟು ರದ್ದತಿಯನ್ನು ಸಮರ್ಥಿಸಿಕೊಂಡ ಜೇಟ್ಲಿ, ಇದೊಂದು ಕಪ್ಪುಹಣ ನಿಗ್ರಹ ಕ್ರಮವಾಗಿತ್ತು ಎಂದು ಹೇಳಿದ್ದಾರೆ. ಜತೆಗೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸಚಿವರು ದೇಶದಾದ್ಯಂತ ಸಂಚರಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ನವೆಂಬರ್ 8 ಅನ್ನು ವಿರೋಧ ಪಕ್ಷಗಳು ‘ಕರಾಳ ದಿನ’ವನ್ನಾಗಿ ಆಚರಿಸಲಿವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು ಮಂಗಳವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.