ADVERTISEMENT

ನಾರಾಯಣ ಗುರು ಪುಸ್ತಕ ಬಿಡುಗಡೆ

ಪಿಟಿಐ
Published 19 ಜೂನ್ 2018, 4:49 IST
Last Updated 19 ಜೂನ್ 2018, 4:49 IST
ಸಂತ ನಾರಾಯಣ ಗುರು
ಸಂತ ನಾರಾಯಣ ಗುರು   

ನವದೆಹಲಿ: ಕೇರಳದ ಸಮಾಜ ಸುಧಾರಕ, ಸಂತ ನಾರಾಯಣ ಗುರು ಅವರು ಜೀವನ ಚರಿತ್ರೆ, ಅವರ ಬೋಧನೆಗಳು ಹಾಗೂ ತತ್ವಗಳನ್ನು ಒಳಗೊಂಡ ಹೊಸ ಪುಸ್ತಕ ಬಿಡುಗಡೆಯಾಗಿದೆ.

ಅಮೆರಿಕ ಮೂಲದ ಲೇಖಕ ಅಶೋಕನ್‌ ವೆಂಗಸ್ಸೆರಿ ಕೃಷ್ಣನ್‌ ಬರೆದಿರುವ ‘ಶ್ರೀ ನಾರಾಯಣ ಗುರು, ದಿ ಪರ್‌ಫೆಕ್ಟ್‌ ಯೂನಿಯನ್‌ ಆಫ್‌ ಬುದ್ಧ ಅಂಡ್‌ ಸಂಸ್ಕಾರ– ಎ ಕಾಂಪ್ರಹೆನ್ಸಿವ್‌ ಬಯಾಗ್ರಫಿ’ ಪುಸ್ತಕದಲ್ಲಿ ಕೇರಳದ ಈ ಸಂತ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ವಿವರಗಳಿವೆ.

‘ನಾರಾಯಣ ಗುರು ಅವರ ಸಾಮಾಜಿಕ ಸಮಾನತೆ ಬಗೆಗಿನ ಕಲ್ಪನೆ, ಅಧ್ಯಾತ್ಮ ಸ್ವಾತಂತ್ರ್ಯ ಹಾಗೂ ಜಾತಿಮುಕ್ತ ರಾಷ್ಟ್ರದ ಕಲ್ಪನೆ ಎಲ್ಲರಿಗೂ ಮಾರ್ಗದರ್ಶನ ನೀಡುತ್ತದೆ’ ಎಂದು ಕೃಷ್ಣನ್‌ ಹೇಳಿದರು.

ADVERTISEMENT

ಕೊನಾರ್ಕ್‌ ಪಬ್ಲಿಷರ್‌ ಈ ಪುಸ್ತಕವನ್ನು ಪ್ರಕಟಿಸಿದೆ.

ರಾಜ್ಯಸಭಾ ಸದಸ್ಯ ನರೇಂದ್ರ ಜಾಧವ, ‘ಸಂಶೋಧನಾತ್ಮಕ ಕೃತಿಯಾಗಿರುವ ಇದನ್ನು ಕೃಷ್ಣನ್‌ ಅವರು ಉತ್ತಮವಾಗಿ ರಚಿಸಿದ್ದಾರೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.