ADVERTISEMENT

ನೀರವ್‌ ಮೋದಿಗೆ ಸೇರಿದ ₹170 ಕೋಟಿ ಮೌಲ್ಯದ ಆಸ್ತಿ, ಸ್ವತ್ತುಗಳ ಮುಟ್ಟುಗೋಲು

ಏಜೆನ್ಸೀಸ್
Published 21 ಮೇ 2018, 10:57 IST
Last Updated 21 ಮೇ 2018, 10:57 IST
ನೀರವ್ ಮೋದಿ (ಸಂಗ್ರಹ ಚಿತ್ರ)
ನೀರವ್ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು ₹13,400 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಜ್ರಾಭರಣ ಉದ್ಯಮಿ ನೀರವ್ ಮೋದಿಗೆ ಸೇರಿದ ₹170 ಕೋಟಿ ಮೌಲ್ಯದ ಆಸ್ತಿ ಮತ್ತು ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣಕಾಸು ಚಟುವಟಿಕೆ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಪೈಕಿ ಮುಂಬೈನಲ್ಲಿ ಮತ್ತು ಸೂರತ್‌ನಲ್ಲಿರುವ ನೀರವ್ ಒಡೆತನದ ಫೈರ್‌ಸ್ಟಾರ್ ಇಂಟರ್‌ನ್ಯಾಷನಲ್ ಮತ್ತು ಪೌಂಡ್ರಾ ಎಂಟರ್‌ಪ್ರೈಸಸ್‌ಗೆ ಸೇರಿದ ₹72 ಕೋಟಿ ಮೌಲ್ಯದ ಆಸ್ತಿಯೂ ಸೇರಿದೆ.

ಅಂಧೇರಿಯಲ್ಲಿರುವ ₹63 ಕೋಟಿ ಮಾರುಕಟ್ಟೆ ಮೌಲ್ಯದ ‘ಎಚ್‌ಸಿಎಲ್ ಹೌಸ್’ ಅನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ADVERTISEMENT

ನೀರವ್ ಮೋದಿ, ಅವರ ಸಹೋದರ ನೀಶಲ್ ಮೋದಿ ಮತ್ತು ಇವರಿಬ್ಬರ ಒಡೆತನದ ಸಂಸ್ಥೆಗಳ 108 ಬ್ಯಾಂಕ್ ಖಾತೆಗಳನ್ನೂ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.