ADVERTISEMENT

ನೆಟ್‍ವರ್ಕ್ ಸಿಗದೆ ಮೊಬೈಲ್ ಕರೆ ಮಾಡಲು ಮರ ಹತ್ತಿದ ಕೇಂದ್ರ ಸಚಿವ, ಇದು ಡಿಜಿಟಲ್ ಇಂಡಿಯಾ!

ಏಜೆನ್ಸೀಸ್
Published 5 ಜೂನ್ 2017, 5:16 IST
Last Updated 5 ಜೂನ್ 2017, 5:16 IST
ಅರ್ಜುನ್ ರಾಮ್ ಮೇಘವಾಲ್                                                          ಕೃಪೆ- ಎಎನ್‍ಐ
ಅರ್ಜುನ್ ರಾಮ್ ಮೇಘವಾಲ್ ಕೃಪೆ- ಎಎನ್‍ಐ   

ಬಿಕಾನೇರ್: ರಾಜಸ್ತಾನದ ಬಿಕಾನೇರ್ ಜಿಲ್ಲೆಯಿಂದ 12 ಕಿಮೀ ದೂರದಲ್ಲಿರುವ ದೋಲಿಯಾ ಗ್ರಾಮಕ್ಕೆ ಭೇಟಿ ನೀಡಿದ್ದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮೊಬೈಲ್‍ನಲ್ಲಿ ಮಾತನಾಡಲು ಮರ ಹತ್ತಿದ್ದಾರೆ. ಮೇಘವಾಲ್ ಅವರದ್ದೇ ಸಂಸದೀಯ ಕ್ಷೇತ್ರವಾದ ದೋಲಿಯಾದಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣ ಸಚಿವರು ಮರ ಹತ್ತಿ ಫೋನ್ ಕರೆ ಮಾಡಬೇಕಾಗಿ ಬಂದಿತ್ತು. 

ಭಾನುವಾರ ಮೇಘವಾಲ್ ಅವರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಅಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಅಧಿಕಾರಿಗಳು ಇದಕ್ಕೆ ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದರು. ಜನರ ಸಮಸ್ಯೆಗಳನ್ನು ಆಲಿಸಿದ ಮೇಘವಾಲ್ ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದಾಗ ಆ ಪ್ರದೇಶದಲ್ಲಿ ನೆಟ್‍ವರ್ಕ್ ಸಿಗುತಿರಲಿಲ್ಲ. 

ಪ್ರತಿದಿನವೂ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮೊಬೈಲ್ ನೆಟ್‍ವರ್ಕ್ ಸಿಗಬೇಕಾದರೆ ಮರ ಹತ್ತಬೇಕು ಎಂದು ಸ್ಥಳೀಯರು ಹೇಳಿದಾಗ ಸಚಿವರಿಗೆ ಮರ ಹತ್ತದೆ ಬೇರೆ ದಾರಿ ಇರಲಿಲ್ಲ. ಅಲ್ಲಿನ ಗ್ರಾಮಸ್ಥರು ಏಣಿ ತಂದು ಕೊಟ್ಟು, ಏಣಿ ಮೂಲಕ ಮರ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿ ಗ್ರಾಮಸ್ಥರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.