ADVERTISEMENT

ನೊಬೆಲ್ ಸಾಹಿತ್ಯ ಪ್ರಶಸ್ತಿ: ಸಂಭವನೀಯರ ಪಟ್ಟಿಯಲ್ಲಿ ಭಾರತೀಯರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:35 IST
Last Updated 4 ಅಕ್ಟೋಬರ್ 2011, 19:35 IST

ನವದೆಹಲಿ/ ಕೊಚ್ಚಿ (ಪಿಟಿಐ, ಐಎಎನ್‌ಎಸ್): ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸುವ ಸಾಧ್ಯತೆ ಇರುವ 18 ಮಂದಿ ಪೈಕಿ ಇಬ್ಬರು ಭಾರತೀಯರ ಹೆಸರುಗಳು ಕೇಳಿ ಬಂದಿವೆ.

ಮೂಲತಃ ಕೇರಳದವರಾಗಿದ್ದು ಈಗ ದೆಹಲಿಯಲ್ಲಿ ನೆಲೆಸಿರುವ ಪ್ರಮುಖ ಮಲಯಾಳಂ ಕವಿ ಮತ್ತು ವಿಮರ್ಶಕ ಕೆ. ಸಚ್ಚಿದಾನಂದನ್ ಹಾಗೂ ರಾಜಸ್ತಾನದ ಸಣ್ಣ ಕತೆಗಾರ ವಿಜಯದನ್ ದೇಥಾ ಅವರ ಹೆಸರು ನೊಬೆಲ್ ಸಾಹಿತ್ಯ ಪ್ರಶಸ್ತಿಯ ಸಂಭವನೀಯರ ಪಟ್ಟಿಯಲ್ಲಿದೆ.

 22 ಕವನಸಂಕಲನ,  ಭಾಷಾಂತರದ  16 ಕವನಸಂಕಲನಗಳು  ಸಚ್ಚಿದಾನಂದನ್ ಅವರ ಪ್ರಮುಖ ಕೃತಿಗಳು. ದೇಥಾ ಅವರು 800 ಸಣ್ಣ ಕತೆಗಳನ್ನು ಬರೆದಿದ್ದಾರೆ. ಹಬೀಬ್ ತನ್ವೀರ್ ಅವರ `ಚರಣದಾಸ್ ಚೋರ್~ ಮತ್ತು ಅಮೋಲ್ ಪಾಲೇಕರ್‌ಅವರ `ಪಹೇಲಿ~ ಸೇರಿದಂತೆ ಇವರ ಕೆಲವು ಕತೆಗಳನ್ನು ನಾಟಕ ಮತ್ತು ಚಲನಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.