ADVERTISEMENT

ನೌಕಾಪಡೆಯ ಕ್ಷಿಪ್ರ ಕಾರ್ಯಾಚರಣೆ: 38 ಮಂದಿ ಭಾರತೀಯರ ರಕ್ಷಣೆ

ಪಿಟಿಐ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST

ನವದೆಹಲಿ: ಮೆಕೆನು ಚಂಡಮಾರುತಕ್ಕೆ ಸಿಲುಕಿ ಯೆಮೆನ್‌ನ ಸೊಕೊಟ್ರಾ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತದ 38 ಜನರನ್ನು ಭಾರತೀಯ ನೌಕಾ ಪಡೆ ಭಾನುವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

‘ಭಾರತೀಯರನ್ನು ರಕ್ಷಿಸುವ ಸಂಬಂಧ ರೂಪಿಸಲಾಗಿದ್ದ ‘ಆಪರೇಷನ್‌ ನಿಸ್ತಾರ್‌’ ಅಂಗವಾಗಿ, ಏಡನ್‌ ಕೊಲ್ಲಿಯಲ್ಲಿದ್ದ ಐಎನ್‌ಎಸ್‌ ಸುಯನಾ ಹಡಗನ್ನು ಸೊಕೊಟ್ರಾ ದ್ವೀಪದತ್ತ ತಿರುಗಿಸಲಾಯಿತು’ ಎಂದು ನೌಕಾ ಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ ತಿಳಿಸಿದ್ದಾರೆ.

‘ಚಂಡಮಾರುತಕ್ಕೆ ಸಿಲುಕಿ 10 ದಿನಗಳಿಂದಲೂ ದ್ವೀಪದಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯರನ್ನು ದೇಶಕ್ಕೆ  ಕರೆದುಕೊಂಡು ಬರಲಾಗುತ್ತಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಹಡಗು ಗುಜರಾತ್‌ನ ಪೋರ್‌ಬಂದರ್‌ಗೆ ಬರಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಹಡಗು ಏರಿದ ತಕ್ಷಣ ಎಲ್ಲರಿಗೂ ವೈದ್ಯಕೀಯ ನೆರವು, ಆಹಾರ ಒದಗಿಸಲಾಯಿತು. ದೂರವಾಣಿ ಸೌಕರ್ಯ ನೀಡಿ, ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.