ADVERTISEMENT

ಪರ್ಯಾಯ ರಂಗ ರಚನೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 20:12 IST
Last Updated 29 ಮಾರ್ಚ್ 2018, 20:12 IST
ನಟ ಪ್ರಕಾಶ್ ರೈ, ಕೆ.ಚಂದ್ರಶೇಖರ್ ರಾವ್ ಮಾತುಕತೆ
ನಟ ಪ್ರಕಾಶ್ ರೈ, ಕೆ.ಚಂದ್ರಶೇಖರ್ ರಾವ್ ಮಾತುಕತೆ   

ಹೈದರಾಬಾದ್: ನಟ ಪ್ರಕಾಶ್ ರೈ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಗುರುವಾರ ವಿಧಾನಸಭೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ಯೇತರ ರಾಜಕೀಯ ರಂಗವೊಂದರ ರಚನೆ ಬಗ್ಗೆ ಕೆಸಿಆರ್‌ ಅವರು ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿದ್ದಾರೆ. ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಟುಟೀಕಾಕಾರರಾಗಿದ್ದಾರೆ. ಹಾಗಾಗಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ದೇಶದ ರಾಜಕೀಯ ಪರಿಸ್ಥಿತಿ ಕುರಿತು ಇಬ್ಬರೂ ಚರ್ಚೆ ನಡೆಸಿದ್ದು, ಪರ್ಯಾಯ ರಂಗ ರಚನೆ ಕುರಿತು ಮಾತನಾಡಿರಬಹುದು ಎಂದು ಮೂಲಗಳು ಹೇಳಿವೆ.

ADVERTISEMENT

ಕರ್ನಾಟಕದಲ್ಲಿನ ಚುನಾವಣಾ ಸ್ಥಿತಿ ಕುರಿತು ಕೆಸಿಆರ್ ಅವರು ಪ್ರಕಾಶ್ ರೈ ಅವರಿಂದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೆಸಿಆರ್‌ ಅವರು ಭೇಟಿ ಮಾಡಿ ಪರ್ಯಾಯ ರಂಗ ರಚನೆ ಕುರಿತು ಈಗಾಗಲೇ ಚರ್ಚೆ ನಡೆಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕೆಸಿಆರ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.