ಜಮ್ಮು (ಪಿಟಿಐ): ಪಾಕಿಸ್ತಾನಿ ಪಡೆಗಳು ಭಾನುವಾರ ರಾತ್ರಿ ಎರಡು ಬಾರಿ ಕದನವಿರಾಮ ಉಲ್ಲಂಘಿಸಿದ್ದು, ಜನವಸತಿ ಪ್ರದೇಶ ಮತ್ತು ಭಾರತದ ಮುಂಚೂಣಿ ನೆಲೆಗಳ ಮೇಲೆ ದಾಳಿ ನಡೆಸಿವೆ.
ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 120 ಎಂ.ಎಂ. ಮತ್ತು 82 ಎಂ.ಎಂ. ಸಣ್ಣಫಿರಂಗಿ ಮೂಲಕ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಭಾರ ತದ ಯೋಧರು ಉತ್ತರ ನೀಡಿದ್ದಾರೆ. ಇದೇ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆಯೂ ಪಾಕಿಸ್ತಾನದ ಭಾಗದಿಂದ ಷೆಲ್ ದಾಳಿ ನಡೆದಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿ ಯನ್ನು ಖಂಡಿಸಿದ್ದ ಭಾರತ, ಪಾಕಿಸ್ತಾನದ ಹೈಕಮಿಷನರ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದ ನಂತರವೂ ಪಾಕಿಸ್ತಾನ ತನ್ನ ಹಳೆಯ ವರಸೆ ಮುಂದುವರಿಸಿದೆ. ಪಾಕಿಸ್ತಾನದ ದಾಳಿಗೆ ಭಾರತದ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಜಮ್ಮು ವಲಯದ ಸೇನೆಯ ಸಂಪರ್ಕಾಧಿಕಾರಿ ಮನೀಷ್ ಮೆಹ್ತಾ ಹೇಳಿದ್ದಾರೆ.
ಎರಡು ದಿನಗಳ ಅವಧಿಯಲ್ಲಿ ಭಾರ ತದ 6 ನಾಗರಿಕರು ಪಾಕಿಸ್ತಾನ ದಾಳಿಗೆ ಬಲಿಯಾಗಿದ್ದಾರೆ. ಪೂಂಛ್ ಜಿಲ್ಲೆಯ ಪೂಂಛ್, ಸೌಜಿ ಯಾನ್, ಬಾಲಕೋಟ್, ಹಮೀರ್ ಪುರ ಹಾಗೂ ಮಂಡಿ ವಲಯದ 110 ಕಿ.ಮೀ. ಉದ್ದದ ಗಡಿಯಲ್ಲಿ ಮತ್ತು ರಜೌರಿ ಜಿಲ್ಲೆಯ ಮಂಜಕೋಟೆ ವಲಯದಲ್ಲಿ ಪಾಕಿ ಸ್ತಾನ ಕನದವಿರಾಮ ಉಲ್ಲಂಘನೆ ಮಾಡುತ್ತಿದೆ.
ಮನೆಒಳಗೆ ಇರಲು ಸೂಚನೆ: ಪಾಕಿ ಸ್ತಾನದ ದಾಳಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ ಎಂದು ಮೆಂಧರ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಶೇರ್ ಸಿಂಗ್ ಹೇಳಿದ್ದಾರೆ.
ಇಸ್ಲಾಮಾಬಾದ್ (ಪಿಟಿಐ):ಭಾರತ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸು ತ್ತಿದೆ ಎಂದು ಪಾಕಿಸ್ತಾನ ದೂರಿದ್ದು ಭಾರತದ ಉಪ ಹೈ ಕಮಿಷನರ್ ಅವರನ್ನು ವಿದೇಶಾಂಗ ಇಲಾಖೆ ಕಚೇರಿಗೆ ಕರೆಸಿಕೊಂಡು ಸೋಮವಾರ ಪ್ರತಿಭಟನೆ ದಾಖಲಿಸಿದೆ.
ಪಾಕ್ ಪ್ರತಿಭಟನೆ ದಾಖಲು
ಭಾರತ ಈ ಘಟನೆ ಬಗ್ಗೆ ತನಿಖೆ ನಡೆಸಿ ವಿವರಗಳನ್ನು ಪಾಕ್‌ಗೆ ತಿಳಿಸ ಬೇಕು. ಕದನ ವಿರಾಮ ನಿಯ ಮಕ್ಕೆ ಗೌರವ ನೀಡಬೇಕೆಂದು ತನ್ನ ಪಡೆ ಗಳಿಗೆ ಸೂಚನೆ ನೀಡಬೇಕು ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಶಾಂತಿ ಕಾಯ್ದುಕೊಳ್ಳಬೇಕು ಎಂದು ಉಪ ಹೈಕಮಿಷನರ್‌ಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.