ADVERTISEMENT

ಪೈಲಟ್ ಮುಷ್ಕರ: ಉಭಯರಿಗೂ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 9:45 IST
Last Updated 3 ಮೇ 2011, 9:45 IST

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್ ಮುಷ್ಕರ ಮಂಗಳವಾರ ಏಳನೇ ದಿನವನ್ನು ಪ್ರವೇಶಿಸಿದ್ದು, ಸಮಸ್ಯೆಗೆ ಸಂಬಂಧಿಸಿದಂತೆ ಕಠಿಣ ಧೋರಣೆ ತಾಳಿರುವುದಕ್ಕಾಗಿ ಏರ್ ಲೈನ್ ಆಡಳಿತ ವರ್ಗ ಮತ್ತು ಪೈಲಟ್ಸ್ ಸಂಘವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, ನೆನೆಗುದಿ ಪರಿಸ್ಥಿತಿಯ ನಿವಾರಣೆಗೆ ನೆರವಾಗಲು ನ್ಯಾಯಾಲಯ ಮಿತ್ರನನ್ನು ನೇಮಕ ಮಾಡಿತು.

~ಮುಷ್ಕರ ಕೊನೆಗೊಳಿಸಲು ನಿಮಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ~ ಎಂದು ನ್ಯಾಯಮೂರ್ತಿ ಬಿ.ಡಿ. ಅಹಮದ್ ನೇತೃತ್ವದ ವಿಭಾಗೀಯ ಪೀಠವು ಏರ್ ಇಂಡಿಯಾ ಲಿಮಿಟೆಡ್ ವಕೀಲ ಲಲಿತ್ ಭಾಸಿನ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

~ನಿಮ್ಮಂತಹ ಪಕ್ಷಪಾತಿ ವ್ಯಕ್ತಿಗೆ ನೆರವಾಗಲು ಈ ನ್ಯಾಯಾಲಯ ಬಯಸುವುದಿಲ್ಲ. ಕಾನೂನು ಸಂಬಂಧಿ ವಿಚಾರದಲ್ಲಿ ನಮಗೆ ನೆರವಾಗುವುದಕ್ಕಾಗಿ ನಾವು ~ನ್ಯಾಯಾಲಯ ಮಿತ್ರ~ನನ್ನು ನೇಮಿಸುತ್ತೇವೆ~ ಎಂದು ಭಾಸಿನ್ ಅವರಿಗೆ ಹೇಳುವ ಮೂಲಕ ಪೀಠವು ಏರ್ ಲೈನ್ ಆಡಳಿತ ವರ್ಗದ ಪರವಾಗಿ ಭಾಸಿನ್ ಅವರು ಮಂಡಿಸಿದ ವಾದಗಳನ್ನು ನಿರಾಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.