ADVERTISEMENT

ಫೆ. 29ಕ್ಕೆ 2016–17ನೇ ಸಾಲಿನ ಬಜೆಟ್

ಮುಂದಿನ ಮೂರು ವರ್ಷದ ದಿಕ್ಸೂಚಿ: ಜಯಂತ್‌ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 12:22 IST
Last Updated 14 ಜನವರಿ 2016, 12:22 IST
ಫೆ. 29ಕ್ಕೆ 2016–17ನೇ ಸಾಲಿನ ಬಜೆಟ್
ಫೆ. 29ಕ್ಕೆ 2016–17ನೇ ಸಾಲಿನ ಬಜೆಟ್   

ನವದೆಹಲಿ(ಪಿಟಿಐ): ಫೆ. 29ರಂದು ಪ್ರಸಕ್ತ 2016–17ನೇ ಸಾಲಿನ ಬಜೆಟ್‌ ಮಂಡನೆಯಾಗಲಿದೆ. ಇದು, ಮುಂದಿನ ಮೂರು ವರ್ಷಗಳಿಗೆ ದಿಕ್ಸೂಚಿಯಾಗಲಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಹೇಳಿದರು.

ಭಾರತ- ಕೊರಿಯಾ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಸಿನ್ಹಾ ಅವರು, ಫೆ. 29ರಂದು ಬಜೆಟ್‌ ಮಂಡನೆಗಾಗಿ ಭರದ ಸಿದ್ಧತೆ ನಡೆದಿದೆ. ಪ್ರಸ್ತುತ ಬಜೆಟ್ ಮುಂದಿನ ಮೂರು ವರ್ಷಗಳಿಗೆ ದಿಕ್ಸೂಚಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದ ಆರ್ಥಿಕ ನೀತಿಗಳು ಸ್ಪಷ್ಟವಾಗಿವೆ. ಸುಸ್ಥಿರ ಅಭಿವೃದ್ಧಿ ಮತ್ತು ದೂರದೃಷ್ಟಿಯ ಅಭಿವೃದ್ಧಿ ಗುರಿಯನ್ನು ಬಜೆಟ್‌ ಒಳಗೊಂಡಿದೆ ಎಂದು ಅವರು ಹೇಳಿದರು.

ಬಜೆಟ್‌ ರಚನಾ ಸಮಿತಿಯಲ್ಲಿ ಜಯಂತ್‌ ಸಿನ್ಹಾ ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯ ಇದ್ದಾರೆ.

ಸರ್ಕಾರ ಕೃಷಿ ಉತ್ಪಾದನೆಗೆ ಒತ್ತು ನೀಡುತ್ತಿದೆ. ಸರ್ವರಿಗೂ ಸಾಮಾಜಿಕ ಭದ್ರತೆ ಒದಗಿಸು ನಿಟ್ಟಿನಲ್ಲಿ ವಿನಿಯೋಗಿಸಲಿದೆ. ಆರ್ಥಿಕ ಪುನಶ್ಷೇತನ ಮತ್ತು ಹೂಡಿಕೆ ಹಾಗೂ ಮೂಲಸೌಲಭ್ಯಕ್ಕೆ ಒತ್ತು ನೀಡುವುದು ಪ್ರಸಕ್ತ ಬಜೆಟ್‌ನ ಪ್ರಮುಖ ಅಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.