ADVERTISEMENT

ಬಂಡಾಯ ಶಾಸಕರ ಅನರ್ಹತೆ: ಇಂದು ತೀರ್ಪು

ಪಿಟಿಐ
Published 13 ಜೂನ್ 2018, 19:10 IST
Last Updated 13 ಜೂನ್ 2018, 19:10 IST

ಚೆನ್ನೈ: ಎಐಎಡಿಎಂಕೆಯ  18 ಬಂಡಾಯ ಶಾಸಕರ ಅನರ್ಹತೆ ಪ್ರಕರಣದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಗುರುವಾರ ಪ್ರಕಟಿಸಲಿದೆ. ಕೋರ್ಟ್‌ ನೀಡುವ ತೀರ್ಪಿನ ಮೇಲೆ ಎಐಎಡಿಎಂಕೆ ಸರ್ಕಾರದ ಭವಿಷ್ಯ ನಿಂತಿದೆ. ಅಲ್ಲದೆ, ಇದು ತಮಿಳುನಾಡಿನ ಮುಂದಿನ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿದೆ.

ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ.ಸುಂದರ್‌ ಅವರಿರುವ ದ್ವಿಸದಸ್ಯ ಪೀಠ ಮಧ್ಯಾಹ್ನ 1 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಎಐಎಡಿಎಂಕೆ ನಾಯಕಿ, ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ.ಶಶಿಕಲಾ ಮತ್ತು ಅವರ ಸೋದರಳಿಯ ಟಿ.ಟಿ.ವಿ.ದಿನಕರನ್ ಅವರ ಪರವಾಗಿರುವ 18 ಶಾಸಕರು, ಮುಖ್ಯಮಂತ್ರಿಗೆ ನೀಡಿದ್ದ ಬೆಂಬಲವನ್ನು ಆಗಸ್ಟ್‌ನಲ್ಲಿ ಹಿಂತೆಗೆದುಕೊಂಡಿದ್ದಾರೆ. ನಂತರ ಈ 18 ಶಾಸಕರನ್ನು ಅನರ್ಹಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT