ADVERTISEMENT

ಬಿಸಿ ಬಾಣಲೆ ಮೇಲೆ ಮಗುವನ್ನು ಕೂರಿಸಿದ ತಾಯಿ!

ಪಿಟಿಐ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಬಿಸಿ ಬಾಣಲೆ ಮೇಲೆ ಮಗುವನ್ನು ಕೂರಿಸಿದ ತಾಯಿ!
ಬಿಸಿ ಬಾಣಲೆ ಮೇಲೆ ಮಗುವನ್ನು ಕೂರಿಸಿದ ತಾಯಿ!   

ಹೈದರಾಬಾದ್‌: ಸ್ವತಃ ತಾಯಿಯೇ ನಾಲ್ಕು ವರ್ಷದ ಬಾಲಕಿಯನ್ನು ಬಿಸಿ ಬಾಣಲೆಯ ಮೇಲೆ ಕೂರಿಸಿ ಶಿಕ್ಷಿಸಿದ್ದು, ಆಕೆಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಈ ಸಂಬಂಧ, ಲಲಿತಾ ಎಂ. ಹಾಗೂ ಆಕೆಯ ಎರಡನೇ ಪತಿ ಪ್ರಕಾಶ್‌ ವೈ. ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲನೇ ಗಂಡನಿಂದ ಜನಿಸಿದ್ದ ಈ ಮಗುವನ್ನು ಹೇಗಾದರೂ ಮಾಡಿ ದೂರ ಮಾಡಿಕೊಳ್ಳಬೇಕೆಂಬ ಕಾರಣದಿಂದ ಆಕೆ ಇಂತಹ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸ್‌.ಆರ್‌ ನಗರದ ವಿದ್ಯಾರ್ಥಿ ನಿಲಯದಲ್ಲಿ ಪ್ರಕಾಶ್‌ ಕಾವಲುಗಾರನಾಗಿ ಹಾಗೂ ಲಲಿತಾ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದು, ಇಬ್ಬರೂ 25 ವರ್ಷದವರಾಗಿದ್ದಾರೆ.

ADVERTISEMENT

ಘಟನೆ ಬಳಿಕ ಮಹಿಳಾ ಮತ್ತು ಮಕ್ಕಳ ಬೆಂಬಲ ಕೇಂದ್ರ ‘ಭರೋಸಾ’ಕ್ಕೆ ಮಗುವನ್ನು ಕರೆತಂದ ದಂಪತಿ, ಬೀದಿಯಲ್ಲಿ ಈ ಮಗು ಸಿಕ್ಕಿದ್ದಾಗಿ ತಿಳಿಸಿದ್ದರು. ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಅನ್ವಯ, ಐಪಿಸಿ ಸೆಕ್ಷನ್‌ 324ರ ಅಡಿ ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ಸಂರಕ್ಷಣೆ) ಕಾಯ್ದೆಯಡಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.