ADVERTISEMENT

ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ಟ್ಯಾಗೋರ್ ನೊಬೆಲ್ ಪ್ರಶಸ್ತಿ ತಿರಸ್ಕರಿಸಿದ್ದರು!

​ಪ್ರಜಾವಾಣಿ ವಾರ್ತೆ
Published 11 ಮೇ 2018, 9:10 IST
Last Updated 11 ಮೇ 2018, 9:10 IST
ಬಿಪ್ಲಬ್ ದೇವ್
ಬಿಪ್ಲಬ್ ದೇವ್

ತ್ರಿಪುರಾ: ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್ನೆಟ್, ಸ್ಯಾಟಲೈಟ್‌ ಇತ್ತು ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್,  ರವೀಂದ್ರನಾಥ ಟ್ಯಾಗೋರ್ ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು  ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

1913ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಆಗಸ್ಟ್ 7, 1941ರಂದು ಟ್ಯಾಗೋರ್ ನಿಧನರಾಗಿದ್ದು, ಅಲ್ಲಿಯವರೆಗೆ ನೊಬೆಲ್ ಪ್ರಶಸ್ತಿ ಅವರ ಬಳಿಯೇ ಇತ್ತು. ನಿಜ ಸಂಗತಿ ಏನೆಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ಟ್ಯಾಗೋರ್ ಅವರು ಬ್ರಿಟಿಷರು ನೀಡಿದ ನೈಟ್‍ಹುಡ್ ಪದವಿಯನ್ನು ತಿರಸ್ಕರಿಸಿದ್ದರು.

ಉದಯ್‍ಪುರದ ಭುವನೇಶ್ವರಿ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜಶ್ರೀ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದೇಬ್, ವಿಶ್ವ ವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು ಎಂದಿದ್ದಾರೆ.

ADVERTISEMENT

ಇದನ್ನೂ ಓದಿ

ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್ನೆಟ್,ಸ್ಯಾಟಲೈಟ್‌ ಇತ್ತು: ತ್ರಿಪುರಾ ಮುಖ್ಯಮಂತ್ರಿ

ಡಯಾನಾ ಹೇಡನ್‌ ವಿಶ್ವ ಸುಂದರಿ ಎನ್ನುವುದು ಜೋಕ್‌: ತ್ರಿಪುರ ಸಿಎಂ ಹೇಳಿಕೆ

ಮೆಕಾನಿಕಲ್ ಎಂಜಿನಿಯರ್‌ಗಳು ನಾಗರಿಕ ಸೇವೆಗಳಿಗೆ ಸೇರಬಾರದು: ತ್ರಿಪುರ ಮುಖ್ಯಮಂತ್ರಿ ಹೇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.