ADVERTISEMENT

ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷರಾಗಿ ನರೀಂದರ್‌ ಬಾತ್ರಾ ಅವಿರೋಧ ಆಯ್ಕೆ‌

ಏಜೆನ್ಸೀಸ್
Published 14 ಡಿಸೆಂಬರ್ 2017, 14:32 IST
Last Updated 14 ಡಿಸೆಂಬರ್ 2017, 14:32 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮುಖ್ಯಸ್ಥ ನರೀಂದರ್ ಬಾತ್ರಾ ಅವರು ಭಾರತೀಯ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮುಖ್ಯಸ್ಥರಾಗಿದ್ದುಕೊಂಡು ಐಒಎ ಅಧ್ಯಕ್ಷರಾದ ಕೆಲವೇ ಕೆಲವು ಕ್ರೀಡಾ ಆಡಳಿತಗಾರರ ಸಾಲಿಗೆ ಬಾತ್ರಾ(59) ಸೇರ್ಪಡೆಯಾದರು.

ಚುನಾವಣೆ ಕಣದಲ್ಲಿದ್ದ ಏಷಿಯನ್‌ ಟೆನಿಸ್‌ ಫೆಡರೇಷನ್‌ ಅಧ್ಯಕ್ಷ ಅನಿಲ್ ಖನ್ನಾ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಬಾತ್ರಾ ಆಯ್ಕೆಯಾಗುವುದು ಚುನಾವಣೆಗು ಮೊದಲೇ ಖಚಿತವಾಗಿತ್ತು.

ADVERTISEMENT

ಐಒಎ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಖನ್ನಾ, ‘ತಾವು ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಮತ್ತು ಬಾತ್ರಾ ಅವರನ್ನು ಬೆಂಬಲಿಸುವುದಾಗಿ’ ತಿಳಿಸಿದ್ದರು. ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್ ಅಧ್ಯಕ್ಷ ಬೀರೇಂದ್ರ ಬೈಶ್ಯ ಅವರೂ ಆರಂಭದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ನಂತರ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ್‌ ಮೆಹ್ತಾ ಅವರು ಮರು ಆಯ್ಕೆಯಾಗಿದ್ದು ನಾಲ್ಕು ವರ್ಷ ಅವಧಿಗೆ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.