ADVERTISEMENT

ಮತದಾರರ ಪಟ್ಟಿ: 9ರಂದು ಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಚುನಾವಣಾ ಆಯೋಗ ಮಾರ್ಚ್‌ 9ರಂದು ದೇಶಾದಾದ್ಯಂತ ವಿಶೇಷ ಶಿಬಿರ ಗಳನ್ನು ಆಯೋಜಿಸಿದ್ದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಆಗಿದೆಯೋ ಇಲ್ಲವೋ ಎಂಬುದನ್ನು  ಮತದಾರರು ಪರಿಶೀಲಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಬುಧವಾರ ತಿಳಿಸಿದರು.

ದೇಶದ ಎಲ್ಲಾ ಮತದಾನ ಕೇಂದ್ರ ಗಳಲ್ಲಿ ಮಾರ್ಚ್‌ 9ರಂದು ವಿಶೇಷ ಶಿಬಿರ ನಡೆಯಲಿದ್ದು, ಮತಗಟ್ಟೆ ಅಧಿ ಕಾರಿ­­ಗಳು ಮತದಾರರ ಪಟ್ಟಿ ಯನ್ನು ಪ್ರದರ್ಶಿಸುವರು. ಅಲ್ಲದೇ, ಮತದಾ ರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಗತ್ಯ ಅರ್ಜಿಗಳೂ ಶಿಬಿರ ದಲ್ಲಿ ದೊರೆಯಲಿವೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಅರ್ಜಿ ಭರ್ತಿಮಾಡಿ ಪಟ್ಟಿಗೆ ತಮ್ಮ ಹೆಸರನ್ನು ಚುನಾವಣೆಗೂ ಮುನ್ನ ನೋಂದಾಯಿ ಸ­ಬಹುದು ಎಂದು ಅವರು ಮಾಹಿತಿ ನೀಡಿದರು.

ಯಾರ ಹೆಸರು ಮತದಾರರ ಪಟ್ಟಿ ಯಲ್ಲಿ ಲಭ್ಯವಿರುತ್ತದೆಯೋ ಅವರು ಮಾತ್ರ ಚುನಾವಣೆಯಲ್ಲಿ ಮತ ಚಲಾ­ಯಿ­ಸುವ ಹಕ್ಕನ್ನು ಹೊಂದಿರು ತ್ತಾರೆ ಎಂದೂ ಸಂಪತ್‌ ಸ್ಪಷ್ಟಪಡಿಸಿದರು.

‘ಎಪಿಕ್‌’ (ಎಲೆಕ್ಟ್ರೊ ಫೋಟೊ ಐಡೆಂಟಿ ಕಾರ್ಡ್‌) ಹೊಂದಿರುವವರಿಗೆ ಕಳೆದ ಬಾರಿ ಮತದಾನದ ಹಕ್ಕನ್ನು ನಿರಾಕರಿಸಿ­ರುವ ಕುರಿತು ಆಯೋಗಕ್ಕೆ ಕೆಲ ದೂರು­ಗಳು ಬಂದಿವೆ. ‘ಎಪಿಕ್‌’ ಕಾರ್ಡ್‌  ಕೇವಲ ಗುರುತಿನ ದಾಖಲೆ ಮಾತ್ರ. ಎಪಿಕ್‌ ಕಾರ್ಡ್‌ ಇದ್ದು, ಮತ ದಾರರ ಪಟ್ಟಿ­ಯಲ್ಲಿ ಹೆಸರು ಇಲ್ಲ ದಿದ್ದಲ್ಲಿ ಅಂಥವರು ಮತದಾನದ ಹಕ್ಕನ್ನು ಹೊಂದಿ­ರುವುದಿಲ್ಲ. ಹಾಗಾಗಿ, ಮತ ದಾ­ರರು ಪಟ್ಟಿಯಲ್ಲಿ ತಮ್ಮ ಹೆಸರು ಇರು­ವುದನ್ನು ಖಾತ್ರಿ ಪಡಿಸಿ ಕೊಳ್ಳವುದು ಅಗತ್ಯ ಎಂದು ಸಲಹೆ ನೀಡಿದರು.

ಮುಖ್ಯ ಚುನಾವಣಾಧಿಕಾರಿಗಳ ಅಂತರ್ಜಾಲ ತಾಣದಲ್ಲಿ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸ­ಬಹುದು. ರಾಜ್ಯ ಚುನಾವಣಾ ಆಯೋಗ ನೀಡುವ ದೂರವಾಣಿ ಸಂಖ್ಯೆ­ಗಳಿಗೆ ಎಸ್‌ಎಂಎಸ್‌ ಮಾಡುವ ಮೂಲ­ಕವೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸ­ಬಹುದು. ಮತ­ದಾ­ರರ ಪಟ್ಟಿಯಲ್ಲಿ ಹೆಸರು ನೋಂದಾ­ಯಿಸಲು ನಿಗದಿ­ಪಡಿ­ಸಿ­ರುವ ಕಡೇ ದಿನಾಂಕ­ದಂದು ಮಧ್ಯಾಹ್ನ 3 ಗಂಟೆ ತನಕ ಅವಕಾಶ ವಿರುತ್ತದೆ. ನಂತರ ಹೆಸರು ಸೇರ್ಪಡೆಗೆ ಅವಕಾಶವಿರುವುದಿಲ್ಲ ಎಂದು ವಿವರಿಸಿದರು.

ಅರ್ಹತೆ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ಅಥವಾ ಆಕಸ್ಮಿಕವಾಗಿ, ಕಾರಣವಿಲ್ಲದೇ ಹೆಸರು ಬಿಟ್ಟುಹೋಗಿದ್ದಲ್ಲಿ ಅಂಥವರು ಕೂಡಲೇ ಸಮೀಪದ ಮತಗಟ್ಟೆ ಕೇಂದ್ರ­ಗಳಲ್ಲಿ ಲಭ್ಯವಿರುವ ಫಾರಂ 6 ಅನ್ನು  ಭರ್ತಿಮಾಡಿ, ಮತಗಟ್ಟೆ ಅಧಿಕಾರಿ­ಗಳಿಗೆ ಸಲ್ಲಿಸಬೇಕು ಎಂದು ಸಂಪತ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.