ADVERTISEMENT

ಮರದಿಂದ ಬದುಕುಳಿದ 22 ಯಾತ್ರಿಕರು

ಪಿಟಿಐ
Published 5 ಮೇ 2018, 19:00 IST
Last Updated 5 ಮೇ 2018, 19:00 IST

ಗೋಪೇಶ್ವರ (ಉತ್ತರಖಾಂಡ): ಹಿಮಾಲಯದ ಗಡವಾಲ್ ಮಾರ್ಗವಾಗಿ ಬದರಿನಾಥ ದೇವಾಲಯಕ್ಕೆ ಹೊರಟಿದ್ದ ಬಸ್‌– ಟ್ರಕ್‌ಗೆ ಡಿಕ್ಕಿ ಹೊಡೆದು, ಕಂದಕಕ್ಕೆ ಉರುಳಿ ಬೀಳುವಷ್ಟರಲ್ಲಿ ಮರಕ್ಕೆ ಸಿಲುಕಿದ್ದರಿಂದ ಬಸ್‌ನಲ್ಲಿ ಇದ್ದ 22 ಯಾತ್ರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಎದುರಿನಿಂದ ಬಂದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು ರಸ್ತೆ ಬದಿಯ ಕಂದಕದೊಳಗೆ 90 ಅಡಿಯಷ್ಟು ಜಾರಿದೆ. ಮಧ್ಯೆ ಮರವೊಂದಕ್ಕೆ ಸಿಕ್ಕಿಕೊಂಡು ಬಸ್‌ ಮತ್ತಷ್ಟು ಆಳಕ್ಕೆ ಜಾರಿಲ್ಲ. ತಕ್ಷಣ ಪೊಲೀಸರು ಸ್ಥಳ್ಕಕೆ ಧಾವಿಸಿ ರಾಜಸ್ಥಾನದಿಂದ ಬಂದ 22 ಯಾತ್ರಿಕರನ್ನು ರಕ್ಷಿಸಿದ್ದಾರೆ’ ಎಂದು ಇಂಡೊ ಟಿಬೆಟ್‌ ಗಡಿ ರಕ್ಷಣಾ ಪೊಲೀಸ್‌ ಅಧಿಕಾರಿ ಗಿರೀಶ್ ಚಂದ್ರ ಪುರೋಹಿತ್‌ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.