ADVERTISEMENT

ಮರಾಠಿಗರ ದಮನ: ಬಾಳ ಠಾಕ್ರೆ ಗುಡುಗು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ಮುಂಬೈ (ಪಿಟಿಐ):  ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ ಮತ್ತು ಅಲ್ಲಿನ ಮರಾಠಿ ಮಾತನಾಡುವ ಜನರ ದಮನದ ವರದಿಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದವರನ್ನು ಪ್ರಚೋದಿಸದಂತೆ ನೆರೆಯ ಕರ್ನಾಟಕ ರಾಜಕೀಯ ನಾಯಕರಿಗೆ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

‘ಕರ್ನಾಟಕ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಮಾತ್ರಕ್ಕೆ ಬೆಳಗಾವಿಯ ಮೇಲೆ ಅದರ ಹಕ್ಕನ್ನು ಸಾಧಿಸಲಾಗದು’ ಎಂದು ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಶನಿವಾರ ಬರೆದ ಸಂಪಾದಕೀಯದಲ್ಲಿ ಠಾಕ್ರೆ ಈ ಸವಾಲು ಹಾಕಿದ್ದಾರೆ.‘ಅಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ಲಿಬಿಯಾ ನಿರಂಕುಶಧಿಪತಿ ಕರ್ನಲ್ ಗಡಾಫಿಯ ಆಡಳಿತವಿದೆಯೇ’ ಎಂದು ಪ್ರಶ್ನಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.