ADVERTISEMENT

ಮಸೂದೆ ಅಂಗೀಕಾರ: ದೇವೇಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ನವದೆಹಲಿ: ಸಂಸತ್ತಿನಲ್ಲಿ ಈಗಾಗಲೇ ಮಂಡಿಸಿರುವ ‘ಮತೀಯ ಗಲಭೆ ತಡೆ ಮತ್ತು ಪುನರ್ವಸತಿ ಮಸೂದೆ’ಯನ್ನು ಮುಂದಿನ ಅಧಿವೇಶನದಲ್ಲಿ ಅಂಗೀಕರಿಸು ವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಲಹೆ ಮಾಡಿದ್ದಾರೆ.

ರಾಷ್ಟ್ರೀಯ ಸಮನ್ವಯ ಮಂಡಳಿ ಸಭೆಗೆ ವೈಯಕ್ತಿಕ ಕಾರಣದಿಂದ ಭಾಗವ ಹಿಸಲು ಸಾಧ್ಯವಾಗುತ್ತಿಲ್ಲವೆಂದು ಪ್ರಧಾನಿ ಮನಮೋಹನ್‌ಸಿಂಗ್‌ ಅವರಿಗೆ ಪತ್ರ ಬರೆದಿರುವ ದೇವೇಗೌಡರು, ಮಸೂದೆ ಯನ್ನು ಸ್ಥಾಯಿ ಸಮಿತಿ ಈಗಾಗಲೇ ಪರಿ ಶೀಲಿಸಿದ್ದು, ಎಲ್ಲ ಪಕ್ಷಗಳ ಒಪ್ಪಿಗೆ ಪಡೆದು ಮುಂದಿನ ಅಧಿವೇಶನದಲ್ಲೇ ಅಂಗೀಕರಿಸ ಬೇಕೆಂದು ಹೇಳಿದ್ದಾರೆ.

ಮತಬ್ಯಾಂಕ್‌ ರಾಜಕಾರಣಕ್ಕಾಗಿ ರಾಜಕೀಯ ಪಕ್ಷಗಳು ಮತೀಯ ಸೌಹಾರ್ದ ಕೆಡಿಸುವ ಕೆಲಸಕ್ಕೆ ಕೈ ಹಾಕು ತ್ತಿವೆ. ಇದರ ವಿರುದ್ಧ ಎನ್‌ಐಸಿ ಗಟ್ಟಿ ಯಾಗಿ ದನಿ ಎತ್ತಬೇಕು. ನಮ್ಮ ಸಂವಿಧಾನ ಪ್ರತಿ ಯೊಂದು ಜಾತಿ, ಧರ್ಮಕ್ಕೂ ಸಮಾನ ವಾದ ಅವಕಾಶಗಳನ್ನು ಕೊಟ್ಟಿದೆ. ಮತೀಯ ಭಾವನೆ ಕೆರಳಿಸಿ, ಜನರ ನೆಮ್ಮದಿ ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ.

ಮತಬ್ಯಾಂಕ್‌ ರಾಜಕಾರಣಕ್ಕಾಗಿ ಕೆಲ ಪಕ್ಷಗಳು ಜಾತಿ, ಧರ್ಮಗಳನ್ನು ದುರ್ಬ ಳಕೆ ಮಾಡಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳದಷ್ಟು ನಮ್ಮ ಜನ ದಡ್ಡ ರಲ್ಲ. ಮುಂದಿನ ಚುನಾವಣೆ ಹಿನ್ನೆಲೆ ಯಲ್ಲಿ ಎದುರಾಗಬಹುದಾದ ಅನಾ ಹುತಗಳ ಬಗೆಗೂ ಅವರಿಗೆ ಅರಿವಿದೆ. ರಾಜಕೀಯ ಉದ್ದೇಶ ಸಾಧನೆಗಾಗಿ ತಿಳಿ ನೀರನ್ನು ಕದಡುವ ಕೆಲಸ ಮಾಡ ಬಾರದು ಎಂದು ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತೀಯ ಘರ್ಷಣೆ ಮೊದಲ ಸಲ ಹಳ್ಳಿಗಳಿಗೂ ಕಾಲಿಟ್ಟಿದೆ. ನಿಜಕ್ಕೂ ದುರದೃಷ್ಟಕರ. ನಗರ-ಪಟ್ಟಣ ಪ್ರದೇಶಗಳಲ್ಲಿ ಮತೀಯ ಗಲಭೆ ನಡೆದಾಗ್ಯೂ ಹಳ್ಳಿ ಗಳಲ್ಲಿ ಎಲ್ಲ ಧರ್ಮಗಳ ಜನ ಸಹಬಾಳ್ವೆ ಮಾಡುತ್ತಿದ್ದರು. ಕೋಮು ದ್ವೇಷ ಹರ ಡುವ ಮೂಲಕ ಹಳ್ಳಿಗಳ ವಾತಾವರಣ ಹಾಳು ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.