ADVERTISEMENT

ಮಾನನಷ್ಟ ಮೊಕದ್ದಮೆ ಕೇಜ್ರಿವಾಲ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನಾಗಪುರ (ಪಿಟಿಐ): ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಒಡೆತನದ ಪೂರ್ತಿ ಸಕ್ಕರೆ ಕಾರ್ಖಾನೆಯು ಮಾನನಷ್ಟ ಮೊಕ­ದ್ದಮೆ ದಾಖಲಿಸಿದ ಕಾರಣ ಸ್ಥಳೀಯ ನ್ಯಾಯಾ­ಲಯವು ಆಮ್‌ ಆದ್ಮಿ ಪಕ್ಷದ ನಾಯಕ ಅರ­ವಿಂದ ಕೇಜ್ರಿ­ವಾಲ್‌, ಪಕ್ಷದ ನಾಗಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ದಮಾ­ನಿಯಾ ಮತ್ತು ಇತರ ಐವರು ಕಾರ್ಯಕರ್ತರಿಗೆ ನೋಟಿಸ್‌ ಜಾರಿ ಮಾಡಿದೆ.

ಅರವಿಂದ ಕೇಜ್ರಿವಾಲ್‌, ಅಂಜಲಿ ದಮಾ­­ನಿಯಾ ಮತ್ತು ಎಎಪಿಯ 5 ಕಾರ್ಯ­ಕರ್ತರು ಆಧಾರ ರಹಿತ ಮತ್ತು ಮಾನ­ಹಾನಿಯ ಆರೋಪ ಮಾಡಿದ್ದರು ಎಂದು ಪೂರ್ತಿ ಪವರ್‌ ಮತ್ತು ಸಕ್ಕರೆ ಕಾರ್ಖಾನೆ ನ್ಯಾಯಾ­ಲಯಕ್ಕೆ ದೂರು ನೀಡಿತ್ತು.

ಪ್ರತಿವಾದಿಗೆ ನೋಟಿಸ್‌ ಜಾರಿ ಮಾಡಿರುವ ಸಿವಿಲ್‌ ಕೋರ್ಟ್‌­ನ್ಯಾಯಾ­ಧೀಶ ಎಸ್.ವೈ. ಅಭಿಜಿತ್‌ ಪ್ರಕ­ರ­ಣದ ವಿಚಾರಣೆ­ಯನ್ನು ಮಾ. 21ಕ್ಕೆ ಮುಂದೂ­ಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕರು ಉದ್ದೇಶ­ಪೂರ್ವಕ­ವಾಗಿ ಮಾಡುತ್ತಿರುವ ಆಪಾ­ದ­ನೆಗಳಿಗೆ ಕಡಿ­ವಾಣ ಹಾಕಲು ಸೂಕ್ತ ಆದೇಶ ನೀಡಬೇಕು ಎಂದು ಕೋರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ದಿವೆ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.