ಮುಂಬೈ: ಹಿರಿಯ ಲೇಖಕಿ ಎ.ಪಿ. ಮಾಲತಿ ಅವರಿಗೆ ಇತ್ತೀಚೆಗೆ ಹವ್ಯಕ ವೆಲ್‌ಫೆರ್ ಟ್ರಸ್ಟ್ ವತಿಯಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ'ಯನ್ನು ನೀಡಿ ಸನ್ಮಾನಿಸಲಾಯಿತು.
ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಬದುಕಿನ ವಿಲಕ್ಷಣ ಅನುಭವಗಳನ್ನು ವಿವರಿಸಿದರು. ಹಳ್ಳಿ, ಪಟ್ಟಣಗಳ ಅಪಾರ ಅನುಭವ ತಮ್ಮ ಸಾಹಿತ್ಯದ ಕೃಷಿಗೆ ಕಾರಣವಾಯಿತು ಎಂದು ಹೇಳಿದರು.
`ಮುಂಡಿಗೆ ಉಗಾಭೋಗ' ಪ್ರಾತ್ಯಕ್ಷಿಕೆಯನ್ನು ಶ್ಯಾಮಲಾ ಪ್ರಕಾಶ್ ನಡೆಸಿಕೊಟ್ಟು ದಾಸರ ಪದಗಳ ಮಾಧುರ‌್ಯ ಅನುಭವಿಸುವಂತೆ ಮಾಡಿದರು.
ಸಮಾರಂಭದಲ್ಲಿ ಟ್ರಸ್ಟಿನ ಅಧ್ಯಕ್ಷ ಎನ್.ಆರ್. ಹೆಗಡೆ, ಉಪಾಧ್ಯಕ್ಷ ದತ್ತಗುರು, `ಹವ್ಯಕ ಸಂದೇಶ'ದ ಸಂಪಾದಕಿ ಅಮಿತಾ ಭಾಗವತ್, ಚಂದ್ರಶೇಖರ ಪಾಲೆತ್ತಾಡಿ, ಡಾ.ಜಿ.ಡಿ. ಜೋಶಿ ಈ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಸುಬ್ರಾಯ ಭಟ್ಟರು ರಚಿಸಿ ನಿರ್ದೇಶಿಸಿದ ಬೆಂಗಳೂರಿನ ವಿಜಯರಂಗದ ಕಲಾವಿದರು ಅಭಿನಯಿಸಿದ `ಸಾಂಖ್ಯರ ಸಂಸಾರ' ನಾಟಕ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.