ADVERTISEMENT

ಮುಂಬೈ ಸಬ್‌ಅರ್ಬನ್‌ ರೈಲು ಸಾರಿಗೆಯಿಂದ ₹ 4,000 ಕೋಟಿ ನಷ್ಟ

ಏಜೆನ್ಸೀಸ್
Published 7 ಮಾರ್ಚ್ 2018, 14:08 IST
Last Updated 7 ಮಾರ್ಚ್ 2018, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂಬೈನಲ್ಲಿ ಮೂರು ವರ್ಷದಿಂದ ಸಬ್‌ಅರ್ಬನ್‌ ರೈಲು ಓಡಿಸುತ್ತಿರುವುದರಿಂದ ₹ 4,000ಕ್ಕೂ ಹೆಚ್ಚು ಕೋಟಿ ನಷ್ಟವಾಗಿದೆ ಎಂದು ಸರ್ಕಾರ ಸಂಸತ್ತಿಗೆ ಬುಧವಾರ ತಿಳಿಸಿತು. ಪ್ರಮುಖ ನಗರಗಳಲ್ಲಿ ಸಬ್‌ಅರ್ಬನ್‌ ರೈಲು ಜಾಲ ವಿಸ್ತರಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುತ್ತಿರುವ ಹಿನ್ನಲೆಯಲ್ಲಿಯೇ ಈ ಅಂಕಿ–ಅಂಶಗಳು ಹೊರಬಿದ್ದಿವೆ.

2014ರಿಂದ 2017ರ ವರೆಗಿನ ಅವಧಿಯಲ್ಲಿ ಮುಂಬೈನಲ್ಲಿ ಸಬ್‌ಅರ್ಬನ್‌(ಉಪನಗರ ಸಾರಿಗೆ) ರೈಲು ಓಡಿಸಿರುವುದರಿಂದ ₹ 4,280.50 ಕೋಟಿ ನಷ್ಟ ಉಂಟಾಗಿದೆ ಎಂದು  ರೈಲ್ವೆ ಇಲಾಖೆಯ ರಾಜ್ಯ ಸಚಿವ ರಾಜನ್‌ ಗೋಹೆನ್‌ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಮುಂಬೈನ ಸಬ್‌ಅರ್ಬನ್‌ ರೈಲು ಸಾರಿಗೆಯಿಂದ ಮೂರು ವರ್ಷದಲ್ಲಿ ₹ 5,206 ಕೋಟಿ ವರಮಾನ ಬಂದಿದೆ. ಹಾಗೆಯೇ, ಆ ಸಾರಿಗೆಗಾಗಿ ₹ 9,486 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

ನಗರದಲ್ಲಿ 465 ಕಿ.ಮೀ. ಉದ್ದವಿರುವ ಈ ರೈಲು ಜಾಲವನ್ನು ₹ 11,000 ಕೋಟಿ ವೆಚ್ಚದಲ್ಲಿ ವಿಸ್ತರಿಸಲಾಗುವುದು. ನಗರದಲ್ಲಿನ ರೈಲು ಮಾರ್ಗಗಳ ಉನ್ನತಿಕರಣ, ವಿಸ್ತರಣೆಗಾಗಿ ₹ 40,000 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ 2018 ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.

ಮುಂಬೈನ ಸಬ್‌ಅರ್ಬನ್‌ ರೈಲುಗಳು 2,342 ಟ್ರಿಪ್‌ಗಳಿಂದ 75 ಲಕ್ಷಕ್ಕಿಂತಲೂ ಹೆಚ್ಚು ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.