ADVERTISEMENT

ಮುಸ್ಲಿಮರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಪ್ರಕಟಿಸಲು ಅವಕಾಶವಿಲ್ಲ: ಫತ್ವಾ ಹೊರಡಿಸಿದ ಉತ್ತರ ಪ್ರದೇಶದ ದಾರುಲ್‌ ಇಫ್ತಾ

ಏಜೆನ್ಸೀಸ್
Published 19 ಅಕ್ಟೋಬರ್ 2017, 10:53 IST
Last Updated 19 ಅಕ್ಟೋಬರ್ 2017, 10:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಹಾರನ್‌ಪುರ: ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರು ಫೋಟೋ ಪ್ರಕಟಿಸುವುದನ್ನು ನಿಷೇಧಿಸಿ ಉತ್ತರ ಪ್ರದೇಶದ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್‌ ದೇವಬಂದ್‌ ಫತ್ವಾ ಹೊರಡಿಸಿದೆ.

ಮುಸ್ಲಿಂ ಸಮುದಾಯದ ಮಹಿಳೆ, ಪುರುಷ ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರ ಫೋಟೋಗಳನ್ನು ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಳ್ಳುವಂತಿಲ್ಲ. ಇದಕ್ಕೆ ಇಸ್ಲಾಂನಲ್ಲಿ ಅವಕಾಶವಿಲ್ಲ ಎಂದು ದಾರುಲ್ ಉಲೂಮ್‌ ದೇವಬಂದ್‌ ಹೊರಡಿಸಿರುವ ಆದೇಶವನ್ನು ದಾರುಲ್‌ ಇಫ್ತಾ ಪ್ರಕಟಿಸಿದೆ.

ವ್ಯಕ್ತಿಯೊಬ್ಬರು ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ತನ್ನ ಮತ್ತು ಪತ್ನಿಯ ಫೋಟೋ ಪ್ರಕಟಿಸಿಕೊಳ್ಳುವುದು ಇಸ್ಲಾಂ ಉಲ್ಲಂಘನೆಯಾಗುತ್ತದೆಯೇ ಎಂದು ಫತ್ವಾ ವಿಭಾಗ ದಾರುಲ್‌ ಇಫ್ತಾಗೆ ಲಿಖಿತ ರೂಪದಲ್ಲಿ ಪ್ರಶ್ನೆ ಸಲ್ಲಿಸಿದ್ದರು.

ADVERTISEMENT

ಇಸ್ಲಾಂನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಮುಸ್ಲಿಂ ಮಹಿಳೆಯರು ಹುಬ್ಬು ಟ್ರಿಮ್‌ ಅಥವಾ ರೂಪುಗೊಳಿಸಿವುದನ್ನು ನಿಷೇಧಿಸಿ ಇದೇ ಅ.9ರಂದು ಫತ್ವಾ ಹೊರಡಿಸಲಾಗಿತ್ತು ಎಂದು ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.